ಬಿಜೆಪಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿರುವ ಸಚಿವ ಡಿವಿ ಸದಾನಂದ ಗೌಡ
ಆದರೆ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಸೂಲಿಬೆಲೆ ವಿರುದ್ಧ ಈ ರೀತಿ ಮಾತನಾಡಿದ್ದು, ಬಿಜೆಪಿಯ ಬೆಂಬಲಿಗರಿಗೇ ಇಷ್ಟವಾಗಿಲ್ಲ. ಹೀಗಾಗಿ ಈಗ ಸಾಮಾಜಿಕ ಜಾಲತಾಣದಲ್ಲಿ ಸದಾನಂದ ಗೌಡರ ವಿರುದ್ಧ ಹಲವರು ಟೀಕಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಿಮ್ಮ ಪರವಾಗಿ ಪ್ರಚಾರ ಮಾಡಲು ಸೂಲಿಬೆಲೆ ಬೇಕಿತ್ತು. ಈಗ ಅವರು ದೇಶದ್ರೋಹಿಯಾಗುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿಗರೇ ಕಿಡಿ ಕಾರುತ್ತಿದ್ದಾರೆ.