ಮಹಿಳೆಯರಿಗೆ ಉಚಿತ ಬಸ್ ಸೇವೆ ಎಫೆಕ್ಟ್

ಭಾನುವಾರ, 18 ಜೂನ್ 2023 (20:23 IST)
ಉಚಿತ ಬಸ್ ಸೇವೆಯಿಂದ ಎಸಿ, ವೋಲ್ವೋ ಬಸ್, ಆಟೋದವರಿಗೆ ಭಾರಿ ಹೊಡೆತ ಬಿದ್ದಿದೆ.ಆದ್ರೆ ಮೆಟ್ರೋಗೆ ಮಾತ್ರ ಯಾವುದೇ ಅಡ್ಡಿ ಆತಂಕ ಇಲ್ಲ.ಮೆಟ್ರೋಗೆ ಶಕ್ತಿ ಯೋಜನೆಯ ಎಫೆಕ್ಟ್ ತಟ್ಟಿಲ್ಲ.ಮಹಿಳಾ ಪ್ರಯಾಣಿಕರು ಮೆಟ್ರೋಗೆ ಕೈಕೊಡ್ತಾರೆ ಎಂದು ಆತಂತಕವಿತ್ತು.ಮೆಟ್ರೋ ಬಿಟ್ಟು ಬಿಎಂಟಿಸಿ ಬಸ್ ಹತ್ತುತ್ತಾರೆ ಎಂದುಕೊಂಡಿದ್ರು.ಆದ್ರೆ ಮೆಟ್ರೋ ತಮ್ಮ ನೆಚ್ಚಿನ ಪ್ರಯಾಣ ಎಂದು ಮಹಿಳಾಮಣಿಗಳು ನಿರೂಪಿಸಿದ್ದಾರೆ.ಐಟಿ, ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಮೆಟ್ರೊ ನೆಚ್ಚಿನ ವ್ಯವಸ್ಥೆಯಾಗಿದೆ.ಶಕ್ತಿ ಯೋಜನೆಗೆ ಜಾರಿಯಾದ ಮೇಲೂ ಮೆಟ್ರೋಗೆ ಎಂದಿನಂತೆ ಜನರ ಓಡಾಟ ಇದೆ.ಶೇ.30-40 ಮಹಿಳಾ ಪ್ರಯಾಣಿಕರು ಎಂದಿನಂತೆ ಮೆಟ್ರೋದಲ್ಲಿ ಓಡಾಟ ನಡೆಸ್ತಿದ್ದಾರೆ.ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಇಲ್ಲವೇ ಇಲ್ಲ.ಶಕ್ತಿ ಯೋಜನೆ ಜಾರಿಯಾದ ಮೂರು ದಿನ.ಕಳೆದ ವಾರ ಮೂರು ದಿನ‌ ಮೆಟ್ರೋ ಪ್ರಯಾಣಿಕರ ಹೋಲಿಕೆ ಯಾವುದೇ ವ್ಯತ್ಯಾಸ ಆಗಿಲ್ಲ .ಕಾಣದ ಪ್ರಯಾಣಿಕರ ಸಂಖ್ಯೆ ಹಾಗೆ ಇದೆ.ಶಕ್ತಿ‌ ಯೋಜನೆ ಜಾರಿಯಾದ ಮೊದಲ ಮೂರು ದಿನ ಮೆಟ್ರೋ ಸೇವೆಯಲ್ಲಿ 11 ಜೂನ್ - 5,18,424 ಪ್ರಯಾಣಿಕರು,12 ಜೂನ್ - 6,32,450 ಪ್ರಯಾಣಿಕರು,13 ಜೂನ್ - 6,16,994 ಪ್ರಯಾಣಿಕರು ಪ್ರಯಾಣಿಸಿದ್ದಾರೆ.ಇನ್ನೂ  ಶಕ್ತಿ‌ ಯೋಜನೆ ಮುನ್ನ ವಾರದ ಮೊದಲ ಮೂರು ದಿನ 4 ಜೂನ್ - 5,07,561 ಪ್ರಯಾಣಿಕರು,5 ಜೂನ್ - 6,25,698 ಪ್ರಯಾಣಿಕರು,6 ಜೂನ್ - 6,20,072 ಪ್ರಯಾಣಿಕರು ಒ್ರಯಾಣಿಸಿದ್ದಾರೆ.ಶಕ್ತಿ‌ ಯೋಜನೆಯಿಂದ‌ ಮೆಟ್ರೋ ಮಹಿಳಾ‌ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿಲ್ಲ.15 ದಿನಗಳ ಮಹಿಳಾ‌ಪ್ರಯಾಣಿಕರ ಓಡಾಟ ಪರಿಶೀಲನೆ ಮಾಡ್ತೇವೆ.ಒಂದು ವಾರದ ಮಹಿಳೆಯರ ಪ್ರಯಾಣ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸವಿಲ್ಲ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ