ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ ಏರಿಕೆಯ ಶಾಕ್..!

ಭಾನುವಾರ, 12 ಫೆಬ್ರವರಿ 2023 (18:15 IST)
ಕರ್ನಾಟಕ ವಿದ್ಯುಚ್ಛಕ್ತಿ ಆಯೋಗ ಫೆ. 13 ರಿಂದ ಮಾರ್ಚ್ 1 ರವರೆಗೆ ಸಾರ್ವಜನಿಕ ಆದಾಲತ್ ನಡೆಸಲಿದ್ದು, ಮತ್ತೆ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ .ಈ ವಿಷಯ ತಿಳಿದ ಹೊಟೇಲ್  ಉದ್ಯಮಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.  ಮತ್ತೆ ಕರೆಂಟ್ ಶಾಕ್ ಗೆ ಹೋಟೆಲ್ ಇಂಡಸ್ಟ್ರಿ ಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.
 
ಫೆಬ್ರವರಿ 13 ರಿಂದ ಸಾರ್ವಜನಿಕ ಆಕ್ಷೇಪಣೆಗೆ ಕೆಇಆರ್‌ಸಿ ಕರೆದಿದೆ.ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ದರ ಪರಿಷ್ಕರಣೆ ಕೋರಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಫೆ. 13 ರಿಂದ ಮಾರ್ಚ್ 1 ರವರೆಗೆ ಸಾರ್ವಜನಿಕ ಆದಾಲತ್ ನಡೆಸಲಿದೆ.ವಿದ್ಯುತ್ ದರ ಏರಿಕೆಯಾಗಲಿದ್ದು,ಈ ನಿರ್ಣಾಯಕ್ಕೆ ಬೃಹತ್ ಬೆಂಗಳೂರು  ಹೊಟೇಲ್ ಹೊಟೇಲ್ ಗಳ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು,ಇದೊಂದು  ಅವೈಜ್ಞಾನಿಕ‌ ನಿರ್ಣಾಯ. ಗ್ರಾಹಕರ ಮೇಲೆ ಹೊರೆ ಹಾಕೋದು ಸಮಂಜಸವಲ್ಲ ಅಂತ  ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ