ಹಣದ ದುರಾಸೆಗೆ ಬಿದ್ದ ಅನರ್ಹ ಶಾಸಕ ನಾರಾಯಣಗೌಡಗೆ ಪಾಠ ಕಲಿಸಿ ಎಂದೋರಾರು?
ಅನರ್ಹ ಶಾಸಕರೊಬ್ಬರು ಹಣದ ದುರಾಸೆಗೆ ಬಿದ್ದು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದ ಆರೋಪಿಸಲಾಗಿದೆ.
ದೊಡ್ಡತ್ತಾರಹಳ್ಳಿ, ಚಿಕ್ಕತ್ತಾರಹಳ್ಳಿ ಗ್ರಾಮಗಳಲ್ಲಿ ಜೆ ಡಿ ಎಸ್ ಪಕ್ಷದ ಅಭ್ಯರ್ಥಿಯಾದ ಬಿ ಎಲ್ ದೇವರಾಜು ಪರ ಪ್ರಚಾರ ನಡೆಸಿ ಮಾತನಾಡಿದ್ರು.
ಕೆ ಸಿ ನಾರಾಯಣಗೌಡರಿಗೆ ಎರಡು ಬಾರಿ ಕೈ ಹಿಡಿದ ತಾಲ್ಲೂಕಿನ ಜನತೆಗೆ ದ್ರೋಹ ಮಾಡಿದ್ದಾರೆ. ಅಲ್ಲದೇ ಚುನಾವಣೆಗೆ ಹಣದ ಹೊಳೆಯನ್ನೇ ಸುರಿಸುತ್ತಿದ್ದಾರೆ. ನಮ್ಮ ತಾಲ್ಲೂಕಿನ ಜನರು ಯಾವುದೇ ಹಣದ ಆಮಿಷಗಳಿಗೆ ಯಾರು ತಮ್ಮ ಹಕ್ಕನ್ನು ಮಾರಿಕೊಳ್ಳುವುದಿಲ್ಲ ಎಂಬ ನಂಬಿಕೆ ಇದೆ ಎಂದ್ರು. ಎಲ್ಲರೂ ಒಗ್ಗಟ್ಟಾಗಿ ಪಕ್ಷ ದ್ರೋಹಿಗೆ ತಕ್ಕ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.