BBK11: ಹನುಮಂತನ ಮುಗ್ಧತೆಗೆ ಯಾರು ನೋವುಂಟು ಮಾಡದಿರಲಿ ಎಂದ ಅಭಿಮಾನಿಗಳು

Sampriya

ಬುಧವಾರ, 23 ಅಕ್ಟೋಬರ್ 2024 (15:59 IST)
Photo Courtesy X
ಬೆಂಗಳೂರು: ಬಿಗ್‌ಬಾಸ್‌ ಸೀಸನ್ 11ಕ್ಕೆ  ವೈಲ್ಡ್‌ಕಾರ್ಡ್ ಎಂಟ್ರಿಯಾಗಿರುವ ಗಾಯಕ ಹನುಮಂತ ಅವರ ಮುಗ್ದತೆಗೆ ಕನ್ನಡಿಗರು ಫಿದಾ ಆಗಿದ್ದಾರೆ. ಸರಳ ಹಾಗೂ ಹಳ್ಳಿ ಸೊಗಡಿನ ಭಾಷೆಯಿಂದ ಗಾಯನ ಲೋಕದಲ್ಲಿ ಮಿಂಚಿದ ಹನುಮಂತು ಇದೀಗ ಬಿಗ್‌ಬಾಸ್‌ ಮನೆಯಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ.

ದೊಡ್ಮನೆಗೆ ಹನುಮಂತ ಕಾಲೀಡುತ್ತಿದ್ದ ಹಾಗೇ ಬಿಗ್ ಬಾಸ್​ಗೆ ಸರಿಯಾದ ವ್ಯಕ್ತಿ ಅಲ್ಲ ಎನ್ನುವ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು. ಆದರೆ ಇದೀಗ ಹನುಮಂತು ಬಿಗ್‌ಬಾಸ್ ಪ್ರಿಯರು ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಆಗಾಗ ಹಾಡು ಹೇಳುತ್ತಾ, ತಮ್ಮ ಮುಗ್ಧತೆಯ ಮೂಲಕ ಮನೆಯವರ ಮನಸ್ಸನ್ನು ಗೆಲ್ಲುತ್ತಿದ್ದಾರೆ.

ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಹನುಮಂತ ಮುಗ್ಧತೆ ನೋಡಿ, ಆತನಿಗೆ ಯಾರು ನೋವಾಗದ ಹಾಗೇ ನಡೆದುಕೊಳ್ಳಿ ಎನ್ನುತ್ತಿದ್ದಾರೆ. ಕನ್ಫೆಷನ್​ರೂಂನಲ್ಲಿ ಮನೆಯಲ್ಲಿ ಅರ್ಹತೆ ಇಲ್ಲದ ಇಬ್ಬರು ಸದಸ್ಯರನ್ನು ನಾಮಿನೇಟ್ ಮಾಡಿ ಎಂದು ಹೇಳಿದಾಗ ಹನುಮಂತು ಹೆದರಿಕೊಂಡಿದ್ದಾನೆ.

ಇಲ್ಲಿ ಎಲ್ಲರೂ ಕೂಡಾ ಮನೆಯಲ್ಲಿ ಇರಲು ಅರ್ಹರಾದವರು ಎಂದಿದ್ದಾರೆ. ಅದಕ್ಕೆ ಬಿಗ್‌ಬಾಸ್‌ ಹಾಗೇ ಹೇಳುವ ಹಾಗೇ ಇಲ್ಲ, ಇಬ್ಬರು ವ್ಯಕ್ತಿಗಳನ್ನು ಆಯ್ಕೆ ಮಾಡಿ, ಇದು ಬಿಗ್‌ಬಾಸ್ ನಿಯಮ ಎಂದಿದ್ದಾರೆ. ಅದಕ್ಕೆ ಹನುಮಂತು ಹಂಸ ಅವರನ್ನು ಹಾಗೂ ತಾನೇ ಮನೆಯಲ್ಲಿಇರಲು ಅರ್ಹನಿಲ್ಲ ಎಂದಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು, ನಿಮ್ಮ ಮುಗ್ಧತೆಗೆ ಯಾರು ನೋವುಂಟು ಮಾಡದಿರಲಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ