ಖಾಸಗಿ ವೀಡಿಯೋ ಬಹಿರಂಗದ ಭೀತಿ : ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆಗೈದ!

ಶನಿವಾರ, 19 ಆಗಸ್ಟ್ 2023 (08:57 IST)
ಚಿಕ್ಕೋಡಿ : ಖಾಸಗಿ ವೀಡಿಯೋ ವಿಚಾರ ಬಹಿರಂಗವಾಗುವ ಭೀತಿಯಲ್ಲಿ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ರಾಯಬಾಗದ ಹಾರೂಗೇರಿ ಪಟ್ಟಣದ ಹೊರವಲಯದ ಬಡಬ್ಯಾಕೂಡ್ನಲ್ಲಿ ನಡೆದಿದೆ.

ಅಕ್ಬರ್ ಜಮಾದಾರ್ (21) ಕೊಲೆಯಾದ ದುರ್ದೈವಿ. ಬಸ್ತವಾಡ ಹೊರವಲಯ ಅರಣ್ಯ ಪ್ರದೇಶದಲ್ಲಿ ಯುವಕನನ್ನು ಕೊಲೆ ಮಾಡಲಾಗಿದೆ. ಬಡಬ್ಯಾಕೂಡ್ನ ಮಹಾಂತೇಶ ಪೂಜಾರ್ (23) ಕೊಲೆಗೈದ ಆರೋಪಿಯಾಗಿದ್ದಾನೆ. ಕೊಲೆಯಾದ ಅಕ್ಬರ್ ಹಾಗೂ ಹಂತಕ ಮಹಾಂತೇಶ ಇಬ್ಬರೂ ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮಹಾಂತೇಶ್ ಯುವತಿಯೊಬ್ಬಳ ಜೊತೆಗಿನ ಖಾಸಗಿ ವೀಡಿಯೋವನ್ನು ತನ್ನದೇ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಹಣಕಾಸಿನ ವೈಷಮ್ಯದ ವಿಚಾರಕ್ಕೆ ಆ ಮೊಬೈಲ್ನ್ನು ಅಕ್ಬರ್ ಕಸಿದುಕೊಂಡಿದ್ದ. ಆದರೆ ವೀಡಿಯೋ ಎಲ್ಲಿ ಬಹಿರಂಗವಾಗುತ್ತದೆಯೋ ಎಂದು ಮಹಾಂತೇಶ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಆರೋಪಿ ಮಹಾಂತೇಶನನ್ನು ಹಾರೂಗೇರಿ ಪೊಲೀಸರು ಬಂಧಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ