Lkg ಹಾಗೂ Ukg ಆರಂಭಕ್ಕೆ ಗ್ರೀನ್ ಸಿಗ್ನಲ್
ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳು ಆರಂಭವಾಗಿದ್ದು, ಇತ್ತೀಚೆಗೆ 1 ರಿಂದ 5 ನೇ ತರಗತಿ ಆರಂಭವಾಗಿತ್ತು . ಆದ್ರೆ ಎಲ್ ಕೆ ಜಿ ಯುಕೆಜಿ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದಿಲ್ಲ . ಇದೀಗ ಎಲ್ ಕೆ ಜಿ , ಯುಕೆಜಿ ಆರಂಭಕ್ಕೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ನವೆಂಬರ್ 8ರಿಂದ Lkg ಹಾಗೂ Ukg ಆರಂಭವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಮಾರ್ಗಸೂಚಿ ಪ್ರಕಾರ Lkg ಹಾಗೂ Ukg ಕೇಂದ್ರವನ್ನ ಮೊದಲು ಸ್ವಚ್ಛಗೊಳಿಸಬೇಕು.ರಾಸಾಯನಿಕ ದ್ರಾವಣ ಸಿಂಪಡಿಸಿ Lkg ಹಾಗೂ Ukg ಕೇಂದ್ರ ಸಿದ್ಧಪಡಿಸಬೇಕು. Lkg ಹಾಗೂ Ukg ಗೆ ಮಕ್ಕಳು ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ.ಕೊವಿಡ್ ಲಕ್ಷಣ ಇರೊ ಮಕ್ಕಳಿಗೆ Lkg ಹಾಗೂ Ukg ಪ್ರವೇಶ ಇರುವುದಿಲ್ಲ. ಇನ್ನೂ Lkg ಹಾಗೂ Ukg ಫಲಾನುಭವಿ ಪೋಷಕರಿಗೂ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿದ್ದು, ಕೊವಿಡ್ ಪಾಸಿಟಿವಿಟಿ ದರ 2% ಕ್ಕಿಂತ ಕಡಿಮೆ ಇರೊ ಜಿಲ್ಲೆಗಳಲ್ಲಿ ಮಾತ್ರ Lkg ಹಾಗೂ Ukg ಆರಂಭವಾಗಲಿದೆ. Lkg ಹಾಗೂ Ukg ಬೆಳ್ಳಿಗೆ 9:39 ರಿಂದ ಸಂಜೆ 3:39 ಗಂಟೆವರೆಗೆ ಓಪನ್ ಇರಲಿದೆ.