ಜೂನ್ 18 ರಿಂದ ಆರಂಭವಾಗಿರುವ ಗೃಹಜ್ಯೋತಿ ನೊಂದಣಿಗೆ ರಾಜ್ಯದ ಜನರು ಭರ್ಜರಿಯಾಗಿ ಸ್ಪಂದಿಸಿದ್ದು,
ನಿನ್ನೆ ಸಂಜೆಯವರೆಗೆ 51,17,693 ಗ್ರಾಹಕರು ನೋಂದಣಿ ಮಾಡಿದ್ದಾರೆ. ಇ- ಆಡಳಿತ ಇಲಾಖೆ ರಾಜ್ಯದ 2,000 ವಿದ್ಯುತ್ ಕಚೇರಿಗಳಿಗೆ ಪ್ರತ್ಯೇಕ ನೋಂದಣಿ ಲಿಂಕ್ನ್ನು ನೀಡಿದ ನಂತರದಲ್ಲಿ ನೋಂದಣಿಗೆ ವೇಗ ಸಿಕ್ಕಿದೆ.ಪ್ರತಿದಿನ ಗೃಹಜ್ಯೋತಿಗೆ ನೋಂದಣಿಗೆ ಲಕ್ಷಾಂತರ ಗ್ರಾಹಕರು ಅರ್ಜಿ ಸಲ್ಲಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೊಟ್ಟಿರೋ ಲಿಂಕ್ ಮೂಲಕವೇ ನೋಂದಣಿ ಮಾಡುವಂತೆ ಇಲಾಖೆ ಸೂಚಿಸಿದೆ. ನಿಗದಿತ ಸೇವಾ ಶುಲ್ಕಕ್ಕಿಂತ ಹೆಚ್ಚಿನ ಮೊತ್ತ ಬರಿಸಿದ್ದಲ್ಲಿ 1912ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದೆಂದು ಇಲಾಖೆ ತಿಳಿಸಿದೆ.