ಬಾಣಂತಿ ಸೇರಿ ಅವಳಿ ಹೆಣ್ಣು ಶಿಶು ಬಲಿಪಡೆದ ಎಚ್ 1 ಎನ್ 1

ಮಂಗಳವಾರ, 16 ಅಕ್ಟೋಬರ್ 2018 (14:27 IST)
ಬಾಣಂತಿ ಸೇರಿ ಆಕೆಯ ಅವಳಿ ನವಜಾತ ಶಿಶುಗಳು ಸಾವನಪ್ಪಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆಯಲ್ಲೂ ಮಾರಕ ರೋಗ ಎಚ್1ಎನ್1 ಗೆ ಜನರು ಬಲಿಯಾಗುತ್ತಿದ್ದಾರೆ. ಬಾಣಂತಿ ಸೇರಿ ಆಕೆಯ ಅವಳಿ ನವಜಾತ ಶಿಶುಗಳು ಸಾವನಪ್ಪಿದ್ದ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಈ ಸಾವನ್ನು ಆರೋಗ್ಯ ಇಲಾಖೆ ತಡವಾಗಿ ದೃಢಿಕರಿಸಿದೆ.

ತುಮಕೂರು ತಾಲೂಕಿನ ಕುಪ್ಪೂರು ಗ್ರಾಮದ ರಂಗನಾಥ್ ಅವರ ಪತ್ನಿ ಕಾವ್ಯಾ ಹಾಗೂ ಆಕೆಯ ನವಜಾತ ಅವಳಿ ಹೆಣ್ಣು ಶಿಶುಗಳು ಆಗಸ್ಟ್ 27 ರಂದೇ ಎಚ್1ಎನ್1 ಗೆ ಬಲಿಯಾಗಿವೆ.  ಆದರೆ ನ್ಯುಮೋನಿಯಾ ದಿಂದ ಸಾವನಪ್ಪಿದ್ದರು ಎಂದು ಹೇಳಲಾಗಿತ್ತು. ಈಗ ಬಂದ ವರದಿ ಪ್ರಕಾರ  ಎಚ್1ಎನ್1 ನಿಂದಲೇ ಅಸುನೀಗಿದ್ದಾರೆ ಎಂದು ಆರೋಗ್ಯ ಇಲಾಖೆ ದೃಢೀಕರಿಸಿದೆ. 7 ತಿಂಗಳ ಗರ್ಭಿಣಿಯಾದ ಕಾವ್ಯಾಳಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲು ತುಮಕೂರು ದೊಡ್ಡಮನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜ್ವರ ಹತೋಟಿಗೆ ಬಾರದೇ ಇದ್ದಾಗ ಕ್ರಮವಾಗಿ ಬೆಂಗಳೂರಿನ ವಾಣಿವಿಲಾಸ್, ಚಿನ್ಮಯ, ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

ಆದರೆ ಮಣಿಪಾಲ್ ಆಸ್ಪತ್ರೆಯಲ್ಲಿ ಕಾವ್ಯಾ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದರೂ  ಅವು  ಎಚ್1ಎನ್1 ಗೆ ಬಲಿಯಾಗಿದೆ. ಆಗ ತಕ್ಷಣ ಕಾವ್ಯಾಳನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಅಲ್ಲಿ ಕಾವ್ಯಾಗೆ ಚಿಕಿತ್ಸೆ ಫಲಕಾರಿಯಾಗದೇ‌ ಸಾವನಪ್ಪಿದ್ದಾಳೆ. ಈ ಸಾವಿನಿಂದಾಗಿ ಜಿಲ್ಲೆಯ ಜನತೆಯಲ್ಲಿ ಮಾರಕ ರೋಗ ಎಚ್1ಎನ್1 ರ ಭೀತಿ ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ