ಕಾಫಿನಾಡಲ್ಲಿ ಹಲಾಲ್ ಬ್ಯಾನ್ ಕ್ಯಾಂಪೇನ್

ಬುಧವಾರ, 30 ಮಾರ್ಚ್ 2022 (20:16 IST)
ಚಿಕ್ಕಮಗಳೂರಿನಲ್ಲಿ ವ್ಯಾಪಾರದಲ್ಲಿ ಮುಸ್ಲಿಂ ಬ್ಯಾನ್ ಆಯ್ತು, ಈಗ ಹಲಾಲ್ ಬ್ಯಾನ್ ಅಭಿಯಾನ ಆರಂಭವಾಗಿದೆ. ಕಾಫಿನಾಡಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಲಾಲ್ ಬ್ಯಾನ್ ಆರಂಭಿಸಿದ್ದಾರೆ. ಯುಗಾದಿ ಬಳಿಕದ ಹೊಸತೊಡಕಿನಂದು ಮುಸ್ಲಿಂ ಬಳಿ ಮಾಂಸ ಖರೀದಿಸುವುದು ಬೇಡ. ಹಲಾಲ್ ಎಂದರೆ ಅಲ್ಲಾಹ್​​​ ಹೆಸರಿನಲ್ಲಿ ನೈವೇದ್ಯವಾದ ಮಾಂಸ. ಬೇರೆ ದೇವರಿಗೆ ಒಪ್ಪಿಸಿದ ಮಾಂಸವನ್ನ ನಾವೇಕೆ ಸ್ವೀಕರಿಸಬೇಕು? ಹಲಾಲ್ ಮಾಡುವಾಗ ಪ್ರಾಣಿಯ ಕತ್ತಿನ ಭಾಗ ಸೀಳಿ ಬಿಡುತ್ತಾರೆ. ಆಗ ಪ್ರಾಣಿಯ ಮೆದುಳಿನ ಗ್ರಂಥಿಯಿಂದ ವಿಷಕಾರಿ ಅಂಶ ಬಿಡುಗಡೆಯಾಗುತ್ತೆ.ಇಂತಹಾ ಮಾಂಸ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾಗುವುದು ವೈಜ್ಞಾನಿಕವಾಗಿ ನಿರೂಪಿತ. ಎಲ್ಲರೂ ಒಗ್ಗಟ್ಟಾಗಿ ಹಿಂದೂಗಳ ಬಳಿಯೇ ಮಾಂಸ ಸ್ವೀಕರಿಸೋಣ ಎಂದು ಕರಪತ್ರ ಮಾಡಿ ಬಿಡುಗಡೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ