ದೀವಟಿಗೆ ಸಲಾಂ ಆರತಿ ತಡೆಗೆ ಮನವಿ
ಕೊಲ್ಲೂರಿನಲ್ಲಿ ಸಲಾಂ ಆರತಿಯ ವಿರುದ್ಧದ ಕೂಗಿನ ಬಳಿಕ ಇದೀಗ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚಲುವರಾಯಸ್ವಾಮಿಗೆ ಸಲ್ಲುವ ದೀವಟಿಗೆ ಸಲಾಂ ಆರತಿ ವಿರುದ್ಧ ಕೂಗು ಕೇಳಿ ಬರುತ್ತಿದೆ. ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿ ಪ್ರತಿನಿತ್ಯ ಸಂಜೆ 7 ಗಂಟೆಯ ವೇಳೆಯಲ್ಲಿ ದೀವಟಿಗೆ ಸಲಾಂ ಆರತಿ ಮಾಡಲಾಗುತ್ತದೆ. ಇದು ಟಿಪ್ಪು ಸುಲ್ತಾನ್ ಆದೇಶದ ಮೇರೆಗೆ ಮಾಡುತ್ತಿರುವ ಆರತಿ ಹೀಗಾಗಿ ಈ ಆಚರಣೆಯನ್ನು ನಿಲ್ಲಿಸಬೇಕೆಂಬ ಕೂಗು ಕೇಳಿ ಬಂದಿದೆ.