ಕೇವಲ 1,000 ರೂ.ಗಾಗಿ ವೃದ್ಧನನ್ನು ಚಾಕುವಿನಿಂದ ಇರಿದ್ರು!

ಶುಕ್ರವಾರ, 24 ಫೆಬ್ರವರಿ 2023 (10:25 IST)
ಬೆಂಗಳೂರು : ವಿಳಾಸ ಕೇಳುವ ನೆಪದಲ್ಲಿ ಫಾಲೋ ಮಾಡಿಕೊಂಡು ಬಂದು, ಕೇವಲ ಒಂದು ಸಾವಿರ ಹಣಕ್ಕಾಗಿ ಕರುಳು ಆಚೆ ಬರುವ ಹಾಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 
ಸುಕಂದಕಟ್ಟೆಯ ವಿಘ್ನೇಶ್ವರ ನಗರದ ಶಿವಣ್ಣ ಎಂಬ ವೃದ್ಧ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಕೃಷ್ಣ ಹಾಗೂ ನಿರಂಜನ್ ಬಂಧಿತ ಆರೋಪಿಗಳು. ಒಬ್ಬರೇ ಬರೋದನ್ನೆ ಹೊಂಚುಹಾಕಿ ಕೂತಿದ್ದ ಆಸಾಮಿಗಳಾದ ಕೃಷ್ಣ ಮತ್ತು ನಿರಂಜನ್ ಫಾಲೋ ಮಾಡಿದ್ದರು. ನಿರಂಜನ್ ದೂರದಲ್ಲಿ ನಿಂತಿದ್ದರೇ ಕೃಷ್ಣ ಮಾತ್ರ ವೃದ್ಧ ಶಿವಣ್ಣನ ಜೊತೆಯಲ್ಲೇ ನಡೆದುಕೊಂಡು ಹೋಗುತ್ತಿದ್ದ.

ಶಿವಣ್ಣನ ಬಳಿ ಕೃಷ್ಣ ಬಂದು ಪದೇ ಪದೇ ವಿಳಾಸ ಕೇಳುತ್ತಿದ್ದ. ಇದರಿಂದಾಗಿ ಆ ಶಿವಣ್ಣ ಕೂಡ ಊರಿಗೆ ಹೊಸಬ ಇರಬಹುದು ಎಂದು ಹೇಳಿ ವಿಳಾಸ ಹೇಳಿದ್ದಾನೆ. ಇದಾದ ಬಳಿಕ ಸುತ್ತಮುತ್ತ ಜನ ಇಲ್ಲದ್ದನ್ನು ನೋಡಿದ ಆತ ಶಿವಣ್ಣನ ಹೊಟ್ಟೆಗೆ ಚಾಕುವಿನಿಂದ ಇರಿದ್ದಿದ್ದಾನೆ. ಅದಾದ ಬಳಿಕ ಶಿವಣ್ಣನ ಜೇಬಿನಲ್ಲಿದ್ದ 1 ಸಾವಿರ ರೂ. ಹಣವನ್ನು ಕಸಿದು ಪರಾರಿಯಾಗಿದ್ದಾನೆ. ಚಾಕು ಇರಿದ ರಭಸಕ್ಕೆ ಹೊಟ್ಟೆಯಲ್ಲಿದ್ದ ಕರುಳೇ ಹೊರಬಂದಿತ್ತು. ತಕ್ಷಣ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಘಟನೆ ವೇಳೆ ದುರಾದೃಷ್ಟಕ್ಕೆ ಏರಿಯಾದಲ್ಲಿ ಕರೆಂಟ್ ಹೋಗಿತ್ತು. ಅಷ್ಟೇ ಅಲ್ಲದೇ ವೃದ್ಧ ಬೆಳಗ್ಗೆ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿದ್ರೆ ಸಂಜೆ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಸದ್ಯ ಆಸ್ಪತ್ರೆ ಖರ್ಚು 3 ಲಕ್ಷ ಆಗಿದ್ದು, ಪರದಾಡುತ್ತಿದ್ದಾರೆ.

ಒಂದು ವಾರ ನಿರಂತರ ಪರಿಶ್ರಮದಿಂದಾಗಿ ಕೃಷ್ಣ ಹಾಗೂ ನಿರಂಜನ್ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಚಾಕು, ಕಳ್ಳತನ ಮಾಡಿದ್ದ 3 ದ್ವಿಚಕ್ರ ವಾಹನ, ನಗದು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ