ಬಾಡಿಗೆ ಮನೆ ಬದಲಾಯಿಸಿದರೂ ಗೃಹಜ್ಯೋತಿ ಉಚಿತ ವಿದ್ಯುತ್ ಪಡೆಯುವುದು ಹೇಗೆ ಇಲ್ಲಿ ನೋಡಿ

Krishnaveni K

ಗುರುವಾರ, 8 ಆಗಸ್ಟ್ 2024 (12:41 IST)
ಬೆಂಗಳೂರು: ಬಾಡಿಗೆದಾರರು ಬಾಡಿಗೆ ಮನೆ ಬದಲಾಯಿಸಿದ ಬಳಿಕ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಸಾದ್ಯವಾಗಲ್ಲ ಎನ್ನುವ ಚಿಂತೆಯನ್ನು ಈಗ ರಾಜ್ಯ ಸರ್ಕಾರ ದೂರ ಮಾಡಿದೆ. ಬಾಡಿಗೆ ಮನೆ ಬದಲಾಯಿಸಿದರೂ ಉಚಿತ ವಿದ್ಯುತ್ ಪಡೆಯುವುದು ಹೇಗೆ ಇಲ್ಲಿದೆ ವಿವರ.

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯೂ ಒಂದು. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಮಾಸಿಕವಾಗಿ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ. ಈಗಾಗಲೇ ಬೆಂಗಳೂರು ಸೇರಿದಂತೆ ಹಲವು ನಗರ,ಹಳ್ಳಿ ವಾಸಿಗಳೂ ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಇದಕ್ಕೆ ಬಾಡಿಗೆದಾರರೂ ಹೊರತಾಗಿಲ್ಲ.

ಆದರೆ ಬಾಡಿಗೆ ಮನೆ ಬದಲಾಯಿಸುವಾಗ ಏನು ಮಾಡುವುದು ಎಂಬ ಚಿಂತೆ ಬಾಡಿಗೆದಾರರನ್ನು ಕಾಡುತ್ತಿತ್ತು. ಇದಕ್ಕಾಗಿ ಇದೀಗ ರಾಜ್ಯ ಸರ್ಕಾರ ಹೊಸ ಪರಿಹಾರ ನೀಡಿದೆ. ಇನ್ನೀಗ ಮನೆ ಬದಲಾಯಿಸುವ ಬಾಡಿಗೆದಾರರೂ ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ಅದಕ್ಕಾಗಿ ಮನೆ ಬದಲಾಯಿಸಿದ ನಂತರ ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯಲು ಹಳೆ ಮನೆಯ ಆರ್ ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡುವ ಸೌಲಭ್ಯ ಒದಗಿಸಲಾಗಿದೆ. ಹಳೆಯ ಖಾತೆಯನ್ನು ಡಿ-ಲಿಂಕ್ ಮಾಡಿ ಹೊಸ ಆರ್ ಆರ್ ಸಂಖ್ಯೆಯನ್ನು https://sevasindhugs.karnataka.gov.in ಎಂಬ ಲಿಂಕ್ ಗೆ ಹೋಗಿ ನೊಂದಾಯಿಸಿಕೊಳ್ಳಬಹುದಾಗಿದೆ. ಇದರಿಂದ ನೀವು ಬಾಡಿಗೆ ಮನೆ ಬದಲಾಯಿಸಿದರೂ ಉಚಿತ ವಿದ್ಯುತ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ