ಹೈಕೋರ್ಟ್ ವಕೀಲ ದಂಪತಿಗೆ ಮದ್ಯರಾತ್ರಿ ಥಳಿಸಿ ಆ ಮೇಲೆ ಮಾಡಿದ್ದೇನು?

ಗುರುವಾರ, 14 ಮಾರ್ಚ್ 2019 (14:05 IST)
ಹೈಕೋರ್ಟ್ ವಕೀಲರೊಬ್ಬರ ಮೇಲೆ ದುಷ್ಕರ್ಮಿಗಳು ಮದ್ಯರಾತ್ರಿ ಮನೆಗೆ ನುಗ್ಗಿ ಥಳಿಸಿರುವ ಘಟನೆ ನಡೆದಿದೆ.

ಕಿಟಕಿಯಿಂದ ಮನೆಯೊಳಗೆ ನುಗ್ಗಿ, ಮಲಗಿದವರ ಮೇಲೆ ಹಲ್ಲೆ ಮಾಡಿದ ದರೋಡೆ ಮಾಡಿರುವ ಘಟನೆ ಕಲಬುರ್ಗಿಯ ಗಾಬರೆ ಲೇಔಟ್ ನಲ್ಲಿ ನಡೆದಿದೆ. ಕಿಟಕಿಯ ಗ್ರಿಲ್ ಮುರಿದು ಒಳ ನುಗ್ಗಿದ ಕಳ್ಳರು ಮನೆಯಲ್ಲಿ ಮಲಗಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ.

ನಂತರ ಅಲಮಾರಿಯಲ್ಲಿದ್ದ 200 ಗ್ರಾಮ್ ಚಿನ್ನಾಭರಣ, 50 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಹೈಕೋರ್ಟ್ ವಕೀಲ ವೀರೇಶ್ ಬಿರಾದಾರ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ವೀರೇಶ್ ಬಿರಾದಾರ ಹಾಗೂ ಸಂಗೀತಾ ಬಿರಾದಾರ ಎಂಬುವರ ಮೇಲೆ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಬಡಿಗೆಯಿಂದ ಹಲ್ಲೆ ಮಾಡಲಾಗಿದ್ದು, ವೀರೇಶ್ ಬಿರಾದಾರ ತಲೆಗೆ ಗಾಯಗಳಾಗಿವೆ. ಸಂಗೀತಾ ಅವರ ಕೈ ಮತ್ತಿತರ ಕಡೆ ಗಾಯಗಳಾಗಿವೆ. ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ದರೋಡೆಕೋರರಿಂದ ಕೃತ್ಯ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಎಸ್.ಪಿ. ಯಡಾ ಮಾರ್ಟಿನ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ವಕೀಲರ ಸಂಘ ಘಟನೆಯನ್ನು ಖಂಡಿಸಿದ್ದು, ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ