ಬಿಬಿಎಂಪಿಯಲ್ಲಿ ಜೆಡಿಎಸ್‌ ಕಾರ್ಪೋರೇಟರ್‌ಗಳ ಸಂಖ್ಯೆ ಎಷ್ಟಿದೆ: ಜೆಡಿಎಸ್‌ಗೆ ಜಾರ್ಜ್ ಟಾಂಗ್

ಬುಧವಾರ, 30 ಆಗಸ್ಟ್ 2017 (15:05 IST)
ಬಿಬಿಎಂಪಿಗೆ ಮೇಯರ್ ಸ್ಥಾನ ಬಿಟ್ಟುಕೊಡುವ ವಿಟಾರ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿಯಲ್ಲಿ ಜೆಡಿಎಸ್‌ ಕಾರ್ಪೋರೇಟರ್‌ಗಳ ಸಂಖ್ಯೆ ಎಷ್ಟಿದೆ?ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಜೆಡಿಎಸ್ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿ ಕಡಿದುಕೊಳ್ಳುವ ಬಗ್ಗೆ ಚರ್ಚಿಸಿಲ್ಲ. ಮೈತ್ರಿ ಮುಂದುವರಿಸುವುದು ಅವರಿಗೆ ಬಿಟ್ ಸಂಗತಿ ಎಂದು ತಿಳಿಸಿದ್ದಾರೆ. 
 
ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ಹಿರಿಯರು ಅವರಿಗೆ ಎಲ್ಲವು ಗೊತ್ತಿದೆ. ಮೈತ್ರಿ ಮುಂದುವರಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
 
ಕಾಂಗ್ರೆಸ್ ಸರಕಾರ ಜಿಡಿಎಸ್, ಕಾಂಗ್ರೆಸ್, ಬಿಜೆಪಿ ಕಾರ್ಪೋರೇಟರ್‌ಗಳ ಮಧ್ಯ ತಾರತಮ್ಯ ಮಾಡಿಲ್ಲ. ಎಲ್ಲಾ 198 ವಾರ್ಡ್‌ಗಳ ಅಭಿವೃದ್ಧಿಗೆ ಸರಕಾರ ಬದ್ದವಾಗಿದೆ. ಸರಕಾರದ ಸಹಕಾರದ ಬಗ್ಗೆ ಎಲ್ಲಾ ಕಾರ್ಪೋರೇಟರ್‌ಗಳಿಗೂ ಗೊತ್ತಿದೆ ಎಂದು ತಿಳಿಸಿದ್ದಾರೆ. 
 
ಸಿಎಂ ಸಿದ್ದರಾಮಯ್ಯ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಎನ್ನುವುದನ್ನು ಜೆಡಿಎಸ್ ಮುಖಂಡರು ಮರೆಯಬಾರದು ಎಂದು ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ಕಿವಿಮಾತು ಹೇಳಿದ್ದಾರೆ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ