ಲಕ್ನೋ: ನಿನ್ನೆಯಿಂದ ಸದ್ದು ಮಾಡುತ್ತಿರುವ ಉತ್ತರ ಪ್ರದೇಶದ ಸೌರಭ್ ತಿವಾರಿ ಮರ್ಡರ್ ಗೆ ಆತನ ಪತ್ನಿ ಮತ್ತು ಆಕೆಯ ಪ್ರಿಯಕರ ಮಾಡಿದ್ದ ಖತರ್ನಾಕ್ ಪ್ಲ್ಯಾನ್ ಈಗ ರಿವೀಲ್ ಆಗಿದ್ದು ಬೆಚ್ಚಿಬೀಳಿಸುವಂತಿದೆ.
ಸೌರಭ್ ತಿವಾರಿ ಎಂಬ ನೇವಿ ಮರ್ಚೆಂಟ್ ಆಫೀಸರ್ ನ ಹತ್ಯೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಪತ್ನಿ ಮುಸ್ಕಾನ್ ತನ್ನ ಪ್ರಿಯಕರ ಸಾಹಿಲ್ ಜೊತೆ ಸೇರಿಕೊಂಡು ರಜೆಯಲ್ಲಿ ಮನೆಗೆ ಬಂದಿದ್ದ ಪತಿಯನ್ನು ಕೊಲೆ ಮಾಡಿ ದೇಹವನ್ನು ಪೀಸ್ ಪೀಸ್ ಮಾಡಿ ಡ್ರಮ್ ನಲ್ಲಿ ಮುಚ್ಚಿಟ್ಟಿದ್ದಳು.
ಇದೀಗ ಇಬ್ಬರೂ ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಇಬ್ಬರೂ ಮಾಡಿದ್ದ ಪ್ಲ್ಯಾನ್ ರಿವೀಲ್ ಆಗಿದೆ. 2019 ರಲ್ಲಿ ಸ್ಕೂಲ್ ವ್ಯಾಟ್ಸಪ್ ಗ್ರೂಪ್ ನಿಂದ ಸಾಹಿಲ್ ಮತ್ತು ಮುಸ್ಕಾನ್ ಪರಿಚಯವಾಗುತ್ತದೆ. ಅದಾದ ಬಳಿಕ ಇಬ್ಬರೂ ಚ್ಯಾಟ್ ಮಾಡುತ್ತಿರುತ್ತಾರೆ. ಇದುವೇ ಇಬ್ಬರ ನಡುವೆ ಪ್ರೀತಿ ಬೆಳೆಯಲು ಕಾರಣವಾಗುತ್ತದೆ.
ಕೆಲವು ಸಮಯದ ಹಿಂದೆ ಮುಸ್ಕಾನ್ ಗಂಡನನ್ನು ತೊರೆದು ಸಾಹಿಲ್ ಜೊತೆ ಮದುವೆಯಾಗಲು ತೀರ್ಮಾನಿಸುತ್ತಾಳೆ. ಆದರೆ ತಮ್ಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆಂದು ಆತನನ್ನು ಮುಗಿಸಲು ಪ್ರಿಯಕರನ ಜೊತೆ ಪ್ಲ್ಯಾನ್ ಮಾಡುತ್ತಾಳೆ.
ಮೊದಲು ಇದಕ್ಕೆ ಸಾಹಿಲ್ ಒಪ್ಪಿರಲಿಲ್ಲ. ಆದರೆ ಸ್ನಾಪ್ ಚ್ಯಾಟ್ ಮೂಲಕ ಸಾಹಿಲ್ ಜೊತೆ ಚ್ಯಾಟ್ ಮಾಡುತ್ತಿದ್ದ ಮುಸ್ಕಾನ್ ಆ ಚ್ಯಾಟ್ ಮಾಡುತ್ತಿರುವುದು ನನ್ನ ತೀರಿ ಹೋದ ಅಮ್ಮನ ಅವತಾರ. ಆಕೆಯೇ ಇದನ್ನೆಲ್ಲವನ್ನೂ ಹೇಳಿಸುತ್ತಿದ್ದಾಳೆ ಎಂದು ನಂಬಿಸುತ್ತಾಳೆ. ಕೊಲೆ ಮಾಡುವ ಉದ್ದೇಶದಿಂದಲೇ ಹರಿತವಾದ ಚಾಕುವನ್ನು ಚಿಕನ್ ಕಟ್ ಮಾಡಲು ಎಂದು ಅಂಗಡಿಯವನಿಗೆ ಸುಳ್ಳು ಹೇಳಿ ಖರೀದಿಸಿಟ್ಟುಕೊಂಡಿರುತ್ತಾರೆ.
ಅದರಂತೆ ರಜೆಗೆಂದು ಮನೆಗೆ ಬಂದಿದ್ದ ಸೌರಭ್ ನನ್ನು ಕೊಲ್ಲಲು ಫೆಬ್ರವರಿ 25 ರಂದು ಇಬ್ಬರೂ ಮೊದಲ ಪ್ರಯತ್ನ ಮಾಡುತ್ತಾರೆ. ಸೌರಭ್ ಗೆ ಮತ್ತು ಬೆರೆಸಿದ ಆಹಾರ ನೀಡಲಾಗುತ್ತದೆ. ಆದರೆ ಆ ದಿನ ಸೌರಭ್ ಅದನ್ನು ಸೇವಿಸಿ ನಿದ್ರೆಗೆ ಜಾರುತ್ತಾನೆ ಹೊರತು ಅವರ ಯೋಜನೆಯಂತೆ ಪ್ರಜ್ಞೆ ತಪ್ಪಿ ಬೀಳುವುದಿಲ್ಲ. ಹೀಗಾಗಿ ಅಂದು ಅವರ ಪ್ಲ್ಯಾನ್ ಫೇಲ್ ಆಗುತ್ತದೆ.
ಮತ್ತೆ ಮಾರ್ಚ್ 4 ರಂದು ಮುಸ್ಕಾನ್ ಗಂಡನಿಗೆ ಅದೇ ರೀತಿ ಮತ್ತು ಬರಿಸುವ ಔಷಧಿ ಹಾಕಿದ ಆಹಾರ ನೀಡಿ ಪ್ರಜ್ಞೆ ತಪ್ಪಿಸುತ್ತಾಳೆ. ನಂತರ ಸಾಹಿಲ್ ಜೊತೆ ಸೇರಿಕೊಂಡು ಗಂಡನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡುತ್ತಾಳೆ. ವಿಶೇಷವೆಂದರೆ ಮುಸ್ಕಾನ್-ಸೌರಭ್ ಗೆ 6 ವರ್ಷದ ಮಗಳಿದ್ದು, ಕೊಲೆ ಸಂಚು ಯಶಸ್ವಿಯಾಗಲು ಮಗಳನ್ನು ಮುಸ್ಕಾನ್ ಅಜ್ಜಿ ಮನೆಗೆ ಕಳುಹಿಸಿರುತ್ತಾಳೆ.
ಕೊಲೆ ಬಳಿಕ ದೇಹವನ್ನು ಎಲ್ಲಾದರೂ ಹೂತು ಹಾಕಲು ಇಬ್ಬರೂ ಪ್ಲ್ಯಾನ್ ಮಾಡಿರುತ್ತಾರೆ. ಆದರೆ ನಂತರ ಡ್ರಮ್ ನಲ್ಲಿ ಹೂತು ಹಾಕುತ್ತಾರೆ. ಅದರ ಮೇಲಿನಿಂದ ಸಿಮೆಂಟ್ ಮತ್ತು ಮರಳು ಹಾಕಿ ಮುಚ್ಚುತ್ತಾರೆ.
ಕೃತ್ಯ ನಡೆಸಿದ ಬಳಿಕ ಇಬ್ಬರೂ ಹಿಮಾಚಲಪ್ರದೇಶಕ್ಕೆ ತೆರಳುತ್ತಾರೆ. ಆ ಮೂಲಕ ತಾವು ಮನೆಯಲ್ಲಿ ಇಲ್ಲದೇ ಇದ್ದಾಗ ಘಟನೆ ನಡೆದಿದ್ದು ಎಂದು ಬಿಂಬಿಸಲು ಯತ್ನಿಸುತ್ತಾರೆ. ಮಾರ್ಚ್ 17 ರಂದು ಇಬ್ಬರೂ ಮೀರತ್ ನಿಂದ ಬಂದಿರುತ್ತಾರೆ. ಆ ಬಳಿಕ ಸೌರಭ್ ಕುಟುಂಬಸ್ಥರ ದೂರು ಆಧರಿಸಿ ಇಬ್ಬರನ್ನೂ ತನಿಖೆಗೊಳಪಡಿಸಿದಾಗ ನಿಜ ಹೊರಬರುತ್ತದೆ. ಇದೀಗ ಇಬ್ಬರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.