Ranya Rao: ರನ್ಯಾ ರಾವ್ ಈ ಭಾಗದಲ್ಲೆಲ್ಲಾ ಚಿನ್ನ ಇಟ್ಕೊಂಡು ಬರ್ತಾ ಇದ್ದಳು

Krishnaveni K

ಬುಧವಾರ, 12 ಮಾರ್ಚ್ 2025 (14:37 IST)
ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ನಟಿ ರನ್ಯಾ ಯಾವೆಲ್ಲಾ ಭಾಗದಲ್ಲಿ ಹೇಗೆಲ್ಲಾ ಚಿನ್ನ ಇಟ್ಟುಕೊಂಡು ಬರುತ್ತಿದ್ದಳು ಎಂಬ ಅಂಶ ಬಯಲಾಗಿದೆ.

ದುಬೈನಿಂದ ಇಲ್ಲಿಗೆ ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನ ತರಲು ರನ್ಯಾ ಮಾಸ್ಟರ್ ಪ್ಲ್ಯಾನ್ ನ್ನೇ ಮಾಡುತ್ತಿದ್ದಳು. ತನ್ನ ದೇಹದ ಸಿಕ್ಕ ಸಿಕ್ಕ ಭಾಗಗಳೆಲ್ಲಾ ರನ್ಯಾ ಚಿನ್ನ ಸುತ್ತಿಕೊಂಡು ಬರುತ್ತಿದ್ದಳು ಎಂಬ ಅಂಶ ಬಯಲಾಗಿದೆ.

ಸೊಂಟ, ಹೊಟ್ಟೆ, ತೊಡೆ ಭಾಗದಲ್ಲಿ ಚಿನ್ನದಬಾರ್ ಗಳನ್ನು ಸುತ್ತಿಕೊಂಡು ಅದರ ಮೇಲಿನಿಂದ ಟ್ಯಾಪ್ ಸುತ್ತಿಕೊಂಡು ಬರುತ್ತಿದ್ದಳು. ಆದರೆ ಈ ಬಾರಿ ಆಕೆ ಸಿಕ್ಕಿಬಿದ್ದಿದ್ದಾಳೆ. ಗ್ರೀನ್ ಚಾನೆಲ್ ಮೂಲಕ ಬರುತ್ತಿದ್ದಳು. ಈ ಬಾರಿ ಆಕೆಯ ಮೇಲೆ ಅಧಿಕಾರಿಗಳು ಅನುಮಾನಗೊಂಡು ಪ್ರಶ್ನೆ ಮಾಡುತ್ತಾರೆ. ಬಳಿಕ ಮೆಟಲ್ ಡಿಟೆಕ್ಟರ್ ಮೂಲಕ ಹೋಗಲು ಹೇಳುತ್ತಾರೆ. ಆಗ ಸೈರನ್ ಆಗುತ್ತದೆ.

 ಬಳಿಕ ಅಧಿಕಾರಿಗಳು ಆಕೆಯ ದೇಹ ಪರೀಕ್ಷೆ ಮಾಡುವಾಗ ಚಿನ್ನ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಇಷ್ಟು ದಿನವೂ ಆಕೆ ತಪಾಸಣೆಯಿಲ್ಲದೇ ಗ್ರೀನ್ ಚಾನೆಲ್ ಮೂಲಕ ಹೊರಹೋಗಿದ್ದು ಹೇಗೆ ಎಂಬುದೇ ಪ್ರಶ್ನೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ