ಬಿಪಿಎಲ್ ಕಾರ್ಡ್ ರದ್ದಾಗಿದೆಯೇ ಎಂದು ಚೆಕ್ ಮಾಡುವುದು ಹೇಗೆ

Krishnaveni K

ಶುಕ್ರವಾರ, 15 ನವೆಂಬರ್ 2024 (10:29 IST)
ಬೆಂಗಳೂರು: ಇತ್ತೀಚೆಗೆ ರಾಜ್ಯ ಸರ್ಕಾರ ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ನಡೆಸುತ್ತಿದೆ. ಕೆಲವು ಮಾನದಂಡಗಳನ್ನು ಅನುಸರಿಸದೇ ಇರುವ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗುತ್ತಿದೆ. ಒಂದು ವೇಳೆ ನಿಮ್ಮದು ಬಿಪಿಎಲ್ ಕಾರ್ಡ್ ಅಗಿದ್ದು ರದ್ದಾಗಿದೆಯೇ ಎಂದು ಆನ್ ಲೈನ್ ನಲ್ಲಿ ಚೆಕ್ ಮಾಡುವುದು ಹೇಗೆ ಇಲ್ಲಿ ನೋಡಿ.

ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಯಾವುದೇ ಕೆಲಸಗಳಿಗಾಗಿ ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಕ್ಲಿಕ್ ಮಾಡಬೇಕು. https://ahara.kar.nic.in/ ಎಂಬ ವೆಬ್ ಸೈಟ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಸ್ಥಿತಿಗತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು.  ಅದರ ಸಂಪೂರ್ಣ ಪ್ರಕ್ರಿಯೆಯ ವಿವರಗಳು ಇಲ್ಲಿದೆ ನೋಡಿ.

ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಕ್ಲಿಕ್ ಮಾಡಿ
ಈಗ ಮೇಲಿನ ಸಾಲಿನಲ್ಲಿರುವ ಇ-ಸೇವೆಗಳು ಆಯ್ಕೆಯನ್ನು ಒತ್ತಿ
ಈಗ ಎಡಬದಿಯಲ್ಲಿರುವ ಇ-ಸ್ಥಿತಿ ಎನ್ನುವ ಬಟನ್ ಒತ್ತಿ
ಈಗ ನಿಮ್ಮ ಜಿಲ್ಲೆ ಯಾವ ವಿಭಾಗಕ್ಕೆ ಬರುತ್ತದೋ ಆ ವಿಭಾಗವನ್ನು ಆಯ್ಕೆ ಮಾಡಿ
ಈಗ ಹೊಸದೊಂದು ಪುಟದಲ್ಲಿ ಪಡಿತರ ಚೀಟಿ ವಿವರ ಎಂಬ ಆಯ್ಕೆ ಕಾಣುತ್ತದೆ
ಇದನ್ನು ಕ್ಲಿಕ್ ಮಾಡಿದಾಗ ಒಟಿಪಿ ಸಹಿತ ಅಥವಾ ಒಟಿಪಿ ರಹಿತ ಆಯ್ಕೆ ತೋರಿಸುತ್ತದೆ
ನಿಮ್ಮ ಆಯ್ಕೆಯ ಬಟನ್ ಒತ್ತಿ ರೇಷನ್ ಕಾರ್ಡ್ ವಿವರಗಳನ್ನು ನೀಡಿದರೆ ನಿಮ್ಮ ರೇಷನ್ ಕಾರ್ಡ್ ಸ್ಥಿತಿಗತಿ ವಿವರ ದೊರೆಯುತ್ತದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ