ನನಗೆ ನಿದ್ದೆ,ಆಹಾರದ ಶಿಸ್ತು ಪಾಲಿಸುವುದಕ್ಕೆ ಆಗ್ತಿಲ್ಲ- ಪ್ರಧಾನಿ ಮೋದಿ
ಸಮಯಕ್ಕೆ ಸರಿಯಾಗಿ ನಾನು ಆಹಾರ ಸೇವಿಸಬೇಕಿದೆ ಮತ್ತು ಇನ್ನೂ ಸ್ವಲ್ಪ ಹೆಚ್ಚು ನಿದ್ದೆ ಮಾಡಬೇಕಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಫಿಟ್ನೆಸ್ ತಜ್ಞ ಅಂಕಿತ್ ಬೈಯನ್ ಪುರಿಯಾ ಜತೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಅವರು, 'ನೀವು ದೈಹಿಕ ಚಟುವಟಿಕೆಗೆ ಎಷ್ಟು ಸಮಯ ವಿನಿಯೋಗಿಸುತ್ತೀರಿ?' ಎಂದು ಅಂಕಿತ್ ರನ್ನು ಕೇಳಿದರು. ಅದಕ್ಕೆ ಅಂಕಿತ್, 'ದಿನಕ್ಕೆ 4ರಿಂದ 5 ಗಂಟೆ' ಎಂದರು. ಆಗ ಪ್ರತಿ ಕ್ರಿಯಿಸಿದ ಮೋದಿ, 'ನಾನು ಹೆಚ್ಚು ವ್ಯಾಯಾ ಮಮಾಡುವುದಿಲ್ಲ, ಆದರೆ ದೈನಂದಿನ ಜೀವನ ದಲ್ಲಿ ಶಿಸ್ತನ್ನು ಅನುಸರಿಸುತ್ತೇನೆ. ಆದರೂ ನಿದ್ರೆ ಮತ್ತು ಆಹಾರ ಎಂಬ 2 ವಿಷಯಗಳಿಗೆ ಸಂಬಂಧಿಸಿದಂತೆ ಇನ್ನೂ ಶಿಸ್ತುಬದ್ಧವಾಗಿಲ್ಲ. ಆಹಾರದ ಸಮಯ ಮತ್ತು ನಿದ್ರೆ ಮಾಡಲು ಹೆಚ್ಚು ಸಮ ಯವನ್ನು ನಿಗದಿಪಡಿಸಬೇಕಾಗಿದೆ. ಅದನ್ನು ಮಾಡಲು ನನಗೆ ಸಾಧ್ಯವಾಗುತ್ತಿಲ್ಲ' ಎಂದರು.