ಕಾಸ್ಲಿ ದುನಿಯಾದಲ್ಲಿ ಇದೀಗ ಖಾಸಗಿ ಶಾಲೆಗಳ ವಾಹನ ಶುಲ್ಕ ಹೆಚ್ಚಳ

ಶನಿವಾರ, 9 ಜುಲೈ 2022 (18:50 IST)
ಖಾಸಗಿ ಶಾಲೆಗಳ ಹಣದ ದುರಾಸೆ ಕಡಿಮೆಯಾಗುವ ಲಕ್ಷಣ ಕಾಣ್ತಿಲ್ಲ. ಖಾಸಗಿ ಶಾಲೆಗಳು ಯಾವುದರ ಮೂಲಕ ಪೋಷಕರ ಬಳಿ ಹಣ ವಸೂಲಿ ಮಾಡೋಣ ಅಂತಾ ಹೊಂಚಕ್ತಿರುತ್ತೆ. ಹಾಗೆ ಇಷ್ಟು ದಿನ ಸ್ಕೂಲ್ ಫೀಸ್ ಆಯ್ತು , ಟೆಸ್ಟ್ ಬುಕ್ ನಲ್ಲೂ ಹಣ ವಸೂಲಿ ಮಾಡಿದಾಯ್ತು. ಈಗ ಸ್ಕೂಲ್ ಬಸ್ ನ ಸರದಿ ಶುರುವಾಗಿದೆ.ಖಾಸಗಿ ಶಾಲೆಗಳು ಯಾವುದರ ಮೂಲಕ ಪೋಷಕರ ರಕ್ತ ಹೀರೋಣ ಅಂತಾ ಹೊಂಚಕ್ಕಿ ಕಾಯ್ತಿರುತ್ತೆ ಅನ್ನುವಾಗೆ ಕಾಣುತ್ತೆ. ಇಷ್ಟು ದಿನ ಸ್ಕೂಲ್ ಫೀಸ್ ನೆಪ್ಪದಲ್ಲಿ ಪೋಷಕರ ಬಳ್ಳಿ ಹೇಗೆ ಬೇಕೋ ಹಣ ವಸೂಲಿ ಮಾಡ್ತಿದ್ರು. ಆದ್ರೆ ಈಗ ಸ್ಕೂಲ್ ಬಸ್ ಸರದಿ. ಇದರ ಮೂಲಕ ಹಣ ವಸೂಲಿ ಮಾಡಲು ಖಾಸಗಿ ಶಾಲೆಯವರು ಮುಂದಾಗಿದ್ದಾರೆ. ಸ್ಕೂಲ್ ಬಸ್ ಗಳಿಗೆ ಶೇ 15 ರಿಂದ 20 ರಷ್ಟು ಶುಲ್ಕ ಹೆಚ್ಚಳ ಮಾಡಲು ನಿರ್ಧಾರ ಮಾಡಿಕೊಂಡಿದ್ದು , ಕೆಲ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳಮಾಡಿದೆ. ಇದ್ದವರು ಹೇಗೋ ಎಷ್ಟದ್ದರೂ ಫೀಸ್ ಕಟ್ಟುತ್ತಾರೆ. ಇಲ್ಲದವರ ಪಾಡೇನು? ಈಗ ಸ್ಕೂಲ್ ಬಸ್ ಶುಲ್ಕ ಹೆಚ್ಚಳವಾಗಿದ್ದು ಪೋಷಕರಿಗೆ ಇನ್ನಿಲ್ಲದ ತಲೆನೋವಾಗಿದೆ.
ಕಾಸ್ಲಿ ದುನಿಯಾದಲ್ಲಿ ಇದೀಗ ಖಾಸಗಿ ಶಾಲೆಗಳು ವಾಹನ ಶುಲ್ಕ ಹೆಚ್ಚಳ ವಾಗಿದೆ . ಡೀಸೆಲ್, ವಾಹನದ ಬಿಡಿ ಭಾಗಗಳು, ಸರ್ವಿಸ್ ಚಾರ್ಜ್ ಎಲ್ಲವೂ ರೇಟ್ ಹೆಚ್ಚಳ ಹಿನ್ನೆಲೆ ಹೀಗಾಗಿ 15 ರಿಂದ 20ರಷ್ಟು ಶುಲ್ಕ ಹೆಚ್ಚಳ ಮಾಡಲು ಖಾಸಗಿ  ಶಾಲೆಗಳು ನಿರ್ಧಾರ ಮಾಡಿದೆ. ಇದೆ ನಿರ್ದಾರ ಈಗ ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ . ಖಾಸಗಿ ಶಾಲೆಗಳ ಈ ನಿರ್ಧಾರಕ್ಕೆ ಪೋಷಕರು ವಿರೋಧವನ್ನು ವ್ಯಕ್ತ ಪಡಿಸಿತ್ತಿದ್ದಾರೆ.  ಖಾಸಗಿ ಶಾಲೆಯಗಳು ಶುಲ್ಕವೂ ಜಾಸ್ತಿ ಮಾಡಿದ್ದಾರೆ ಈಗ ವಾಹನ ಶುಲ್ಕ ಹೆಚ್ಚಳ ಮಾಡಿದ್ದಾರೆ ಕಷ್ಟವಾಗಲಿದೆ ಸರ್ಕಾರ ದರ ಜಾಸ್ತಿ ಮಾಡುವ ಖಾಸಗಿ ಶಾಲೆಗಳ ವಿರೋಧ ಕ್ರಮಕ್ಕೆ ಮುಂದಾಗ್ಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ . ಇತ್ತ ಖಾಸಗಿ ಶಾಲೆಯವರನ್ನ ಕೇಳಿದ್ರೆ ಪೆಟ್ರೋಲ್ -ಡಿಸೇಲ್ ಬೆಲೆ ಹೆಚ್ಚಳವಾಗಿದೆ. ಹಾಗಾಗಿ ಸ್ಕೂಲ್ ವ್ಯಾನ್ ಬೆಲೆ ಹೆಚ್ಚುಮಾಡಲಾಗಿದೆ. ನಮ್ಮಗೂ ಕೂಡ ಆದಾಯ ಯಾವುದರ ಮೂಲಕ ಬರುವುದಿಲ್ಲ. ಸರ್ಕಾರ ಪೆಟ್ರೋಲ್ -ಡಿಸೇಲ್ ಬೆಲೆ ಕಡಿಮೆ ಮಾಡಿದ್ರೆ ವಾಹನದ ಶುಲ್ಕವು ಇಳಿಕೆಯಾಗಲಿದೆ ಎಂದು ಖಾಸಗಿ ಶಾಲೆಗಳು ಅಡ್ಡಗೋಡೆ ಮೇಲೆ ದೀಪ ಇಟ್ಟಾಂಗೆ ನುಣ್ಣುಚ್ಚಿಕೊಳ್ಳವಂತೆ ಹೇಳಿದ್ರು. ಖಾಸಗಿ ಶಾಲೆಗಳ ಹಣದಾಸೆಗೆ ಕಡಿವಾಣವೇ ಇಲ್ಲದಂತಾಗಿದೆ. ಯಾವುದರ ಮೂಲಕ ಹಣ ವಸೂಲಿ ಮಾಡೋಣ ಅಂತಾ ಕಾಯ್ತಿರುತ್ತಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ