ಇಂದು ಡಾ.ಪುನೀತ್ ರಾಜ್ ಕುಮಾರ್ ಕನ್ನಡ ಭವನ ಉದ್ಘಾಟನೆ
ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಡಾ.ಪುನೀತ್ ರಾಜ್ ಕುಮಾರ್ ಕನ್ನಡ ಭವನವನ್ನು ಜ್ಞಾನಪೀಠ ಪುರಸ್ಕೃತರಾದ ಚಂದ್ರಶೇಖರ ಕಂಬಾರರವರು ಉದ್ಘಾಟಿಸಿದ್ದಾರೆ.ಶಾಸಕರಾದ ಹ್ಯಾರೀಸ್ ಹೊಸ ವರ್ಷಕ್ಕೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ನಾಗರೀಕರಿಗೆ ಕೊಡುಗೆಯಾಗಿ ಕನ್ನಡ ಭವನವನ್ನ ನೀಡಿದ್ದಾರೆ.ಹಾಗೂ ಡಾ.ಪುನೀತ್ ರಾಜ್ ಕುಮಾರ್ ಸವಿ ನೆನಪಿಗಾಗಿ ಡಾ.ಪುನೀತ್ ರಾಜ್ ಕುಮಾರ್ ಕನ್ನಡ ಭವನ ಎಂದು ನಾಮಕರಣ ಮಾಡಲಾಗಿರುವು ವಿಶೇಷ.ಇನ್ನೂ ಕಾರ್ಯಕ್ರಮದಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹ್ಯಾರೀಸ್ ರವರು. ಜ್ಞಾನಪೀಠ ಪುರಸ್ಕೃತರಾದ ಚಂದ್ರಶೇಖರ ಕಂಬಾರರವರು ಹಾಗು ಕನ್ನಡ ಪರ ಹೋರಾಟಗಾರರಾದ ಸಾರಾ ಗೋವಿಂದ್ ಹಾಗೂ ಕನ್ನಡ ಪರ ಹೋರಾಟಗಾರರು ಭಾಗವಹಿಸಿದ್ರು.