ಸೋಮಣ್ಣಗೆ ಅನ್ಯಾಯವಾಗಿದ್ದು ನಿಜ-ಮುನಿರತ್ನ

ಸೋಮವಾರ, 9 ಅಕ್ಟೋಬರ್ 2023 (21:00 IST)
ಸೋಮಣ್ಣ ಮುನಿಸು ವಿಚಾರವಾಗಿ ಮುನಿರತ್ನ ಪ್ರತಿಕ್ರಿಯಿಸಿದ್ದು,ಸೋಮಣ್ಣಗೆ ಅನ್ಯಾಯ ಆಗಿರೋದು ನಿಜ.ಅವರಿಗೆ ಅವಕಾಶ ಸಿಗಲಿದೆ.ಸೂಕ್ತ ಕಾಲದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ ಅಂತಾ ಮುನಿರತ್ನ ಹೇಳಿದ್ರು.
 
 ಅಲ್ಲದೇ ಸಂಕ್ರಾಂತಿ ನಂತರ ಸರ್ಕಾರ ಬೀಳಬಹುದು ಅನ್ನೋ ವಿಚಾರಕ್ಕೆ ಅಕ್ಕಿ ಕಡಿಮೆ ಇದೆ.ನೆಂಟರು ಬಹಳಷ್ಟು ಇದ್ದಾರೆ.ಅಕ್ಕಿ ಕೊಡೋದಾಗಿ ಹೇಳ್ತಿದ್ದಾರೆ.ಆದ್ರೆ 5 ಕೆ.ಜಿ ಅಕ್ಕಿಯಾದ್ರೂ ಕೊಡಿ ಅಂತ ಲೆಟರ್ ಹೆಡ್ ಹಿಡಿದು ಕಾಯ್ತಿದ್ದಾರೆ.ಪಕ್ಕದ ಮನೆಲ್ಲಿ ಅಕ್ಕಿ ಸಿಗುತ್ತಾ ಅಂತ ಕಾಯ್ತಿದಾರೆ.ಡಿಕೆಶಿ ತಿಹಾರ್ ಜೈಲಿಗೆ ಹೋಗಬಹುದು ಅನ್ನೋ ಹೆಚ್.ಡಿ.ಕೆ ಹೇಳಿಕೆ ವಿಚಾರಕ್ಕೆ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿಗಳು.ಮಾಜಿ ಪ್ರಧಾನಮಂತ್ರಿ ಅವರ ಮಗ.ಅವರಿಗೆ ಯಾವುದೋ ಬಲವಾದ ಮಾಹಿತಿ ಸಿಕ್ಕಿರಬಹುದು.ಹಾಗಾಗಿ ಅವರು ಹೇಳಿದ್ದಾರೆ ಕಾದು ನೋಡೋಣ ಎಂದು ಮುನಿರತ್ನ ಹೇಳಿದ್ದಾರೆ.
 
ಬಿಬಿಎಂಪಿ ಚುನಾವಣೆ ವಿಳಂಭ ವಿಚಾರವಾಗಿ ಸದ್ಯಕ್ಕೆ ನನಗಿರುವ ಮಾಹಿತಿ ಪ್ರಕಾರ ನಾಲ್ಕೈದು ರಿಸರ್ವೇಷನ್ ತಪ್ಪು ಮಾಡ್ತಿದ್ದಾರೆ.ತಪ್ಪು ಮಾಡಿ ಕೋರ್ಟಿಗೆ ಹೋಗೋದಕ್ಕೆ ಚಿಂತನೆ ಇದೆ.ಈಗಗಲೇ ಬಿಬಿಎಂಪಿ ಎಲೆಕ್ಷನ್ ಮಾಡಿದ್ರೆ ಓಡಿ‌ಹೋಗ್ತಾರೆ.ಅದಕ್ಕೆ ನಿನ್ನನ್ನ ಮೆಂಬರ್ ಮಾಡ್ತೀವಿ, ಗೂಟದ ಕಾರು ಕೊಡ್ತೀನಿ ಅಂತಾ ಅದಕ್ಕಾಗಿ ನಿನಗೆ ಬಿಬಿಎಂಪಿ ಟಿಕೆಟ್ ಕೊಡ್ತೀನಿ ಅಂತ ಕಾಯಿಸ್ತಿದ್ದಾರೆ.ಲೋಕಸಭಾ ಚುನಾವಣೆಗೆ ಅವರಿಂದ ಕೆಲಸ ಮಾಡಿಸಿಕೊಳ್ತಾರೆ.ಬಳಿಕ ಬಿಜೆಪಿ ಮಾಡಿದ್ರು ಅಂತ ನಮ್ಮ ಮೇಲೆ ಗೂಬೆ ಕೂರಿಸ್ತಾರೆ.ಇದನ್ನೇ ಮಾಡೋದಕ್ಕೆ ಕಾಯ್ತಿದ್ದಾರೆ, ಬೇಕಾದ್ರೆ ನೋಡಿ.ಇಲ್ಲಿಂದ ಹೋಗಿರೋರನ್ನ ನೋಡಿದ್ರೆ ಪಾಪ ಎನ್ನಿಸ್ತಿದೆ.ದಿನಾ ಟಿಕೆಟ್‌ಗಾಗಿ ಅವರ ಮನೆಗೆ ಅಲೀತಿದ್ದಾರೆ.ಆಯುಧಾ ಪೂಜೆ ಬರ್ತಿದೆ.ಇವರನ್ನ ಕುರಿ ತರ ಕಡೀತಾರೆ ಅಂತಾ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ