ಸಾಹಿತ್ಯ ಸಮ್ಮೇಳನದಲ್ಲಿ ಖರ್ಗೆಗೆ ಅವಮಾನ : ದಲಿತ ಮುಖಂಡರಿಂದ ಸಮ್ಮೇಳನ ಬಹಿಷ್ಕಾರದ ಎಚ್ಚರಿಕೆ

ಸೋಮವಾರ, 27 ಜನವರಿ 2020 (21:03 IST)
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಶುರುವಾಗಿರುವಂತೆಯೇ ಸಮ್ಮೇಳನಕ್ಕೆ ವಿರೋಧ ವ್ಯಕ್ತವಾಗತೊಡಗಿದೆ.

85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಿಕೆ ಮಾಡಬೇಕು. ಹೀಗಂತ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ಗುರುಶಾಂತ ಪಟ್ಟೇದಾರ್ ಒತ್ತಾಯ ಮಾಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, 371 ಜೆ ಹೋರಾಟದ ರೂವಾರಿ ದಿ. ವೈಜನಾಥ್ ಪಾಟೀಲ್, ದಿ.ವಿಶ್ವನಾಥ ರೆಡ್ಡಿ ಮುದ್ನಾಳ್ ಸೇರಿದಂತೆ ಈ ಭಾಗದ ಹಿರಿಯರ ಹೆಸರನ್ನು ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಹಾಕಿಲ್ಲ.

ಹೀಗಾಗಿ ಸಾಹಿತ್ಯ ಸಮ್ಮೇಳನವನ್ನು ಬಹಿಷ್ಕಾರ ಹಾಕೋದಾಗಿ ಅವರು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹಾಗೂ ಖಾಜಾ ಬಂದೇನವಾಜ್ ದರ್ಗಾದ ಸಜ್ಜಾದೆ ಅವರಿಗೆ ಸಮ್ಮೇಳನದಲ್ಲಿ ಸೂಕ್ತ ಸ್ಥಾನಮಾನ ನೀಡದಿದ್ದರೆ ಕಪ್ಪು ಬಾವುಟ ಪ್ರದರ್ಶನ ಮಾಡಿ, ಸಮ್ಮೇಳನ ಬಹಿಷ್ಕಾರ ಮಾಡಬೇಕಾಗುತ್ತದೆ ಅಂತ ಪಟ್ಟೇದಾರ್ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ