ಶಕ್ತಿಕೇಂದ್ರದಲ್ಲಿ ಮೋದಿಗೆ ಮತ್ತೆ ಬಲ ಸಿಗೋದು ಅಲ್ಲಿಂದಲೇನಾ....?

geetha

ಶನಿವಾರ, 10 ಫೆಬ್ರವರಿ 2024 (17:34 IST)
ನವದೆಹಲಿ-ಉತ್ತರ ಭಾರತದಲ್ಲಿ ಯಾವುದೇ ಆತಂಕ, ಭಯ ಅನ್ನೊದೇ ಇಲ್ಲ ನಮೋ ನೇತೃತ್ವದ ಬಿಜೆಪಿಗೆ. ಅದರಲ್ಲೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದಲ್ಲಿ ದಿನಕ್ಕೊಂದು ಬಿರುಕು ಕಾಣಿಸಿಕೊಳ್ತಿದೆ. ಒಬ್ಬರ ನಂತರ ಒಬ್ಬರು ಎಂಬುವAತೆ ಮಹಾಘಟಬಂಧನ್‌ಗೆ ಶಾಕ್ ಮೇಲೆ ಶಾಕ್ ನೀಡುತ್ತಾ ಬರ್ತಾ ಇದ್ದಾರೆ.ಈಗ ನಮೋಗೆ ಇಂಡಿಯಾ ಮಹಾಮೈತ್ರಿಕೂಟದಲ್ಲಿನ ವೀಕ್ನೇಸ್ಸೆ ದೊಡ್ಡ ಪ್ಲಸ್ ಪಾಯಿಂಟ್ ಆಗ್ತಾ ಇದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಆರಂಭದಲ್ಲಿ ಇದ್ದ ಜೋಶ್, ಇದೀಗ ಚುನಾವಣೆ ಎದುರಾಗ್ತಾ ಇರುವ ಹೊತ್ತಲ್ಲಿ ಇಲ್ಲ ಕಾಂಗ್ರೆಸ್ ಸಾರಥ್ಯದ ಇಂಡಿಯಾ ಒಕ್ಕೂಟದಲ್ಲಿ ಅನ್ನೋದೇ ನಮೋ ಸೈನ್ಯದ ಪ್ರಚಂಡ ಧೈರ್ಯಕ್ಕೆ ಮೂಲ ಕಾರಣ.

ಮತ್ತೇ ಮೂರನೇ ಅವಧಿಗೂ ಮೋದಿಯೇ ದೇಶದ ಪ್ರಧಾನಿ ಆಗ್ತಾರೆ, ಇತಿಹಾಸವನ್ನು ಸೃಷ್ಟಿಸ್ತಾರೆ ಅಂತ ಬಹುತೇಕ ಸಮೀಕ್ಷೆಗಳು ಬೆಳಕನ್ನು ಚೆಲ್ಲಿವೆ. ಆದರೂ ಕೂಡ ಎಲೆಕ್ಷನ್ ಅಂದ ಮೇಲೆ ಏನು ಬೇಕಾದರೂ ಆಗಬಹುದು ಅನ್ನೋದು ಈ ಹಿಂದೆ ಹಲವು ಬಾರಿ ಸಾಬೀತಾಗಿದ್ದು ಕಣ್ಣ ಮುಂದಿದೆ.ಮೋದಿ ನೇತೃತ್ವದ ಬಿಜೆಪಿ ಮತ್ತೆ ಶಕ್ತಿಕೇಂದ್ರದಲ್ಲಿ ಅಧಿಕಾರವನ್ನು ಮೂರನೆ ಬಾರಿಗೂ ಮರಳಿ ಪಡೆಯಬಹುದು ಅಂತ ಬರೀ ಸಮೀಕ್ಷೆಗಳು ಹೇಳೊದಲ್ಲ, ಸ್ವತಃ ಇಂಡಿಯಾ ಒಕ್ಕೂಟದ ನಾಯಕರಿಗೂ ಅದರ ಹಿಂಟ್ ಸಿಕ್ಕಾಗಿದೆ. ಹಾಗೆ ನೋಡಿದರೆ ಈ ಬಾರಿಯೂ ಕೇಂದ್ರದಲ್ಲಿ ಮೋದಿ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸ್ತಾರೆ ಅನ್ನೋದು ಆಲ್‌ಮೊಸ್ಟ್ ಎಲ್ಲರ ಬಾಯಲ್ಲೂ ಕೇಳಿ ಬರ್ತಾ ಇದೆ.

ಬಿಜೆಪಿಗೆ ಈ ಬಾರಿ ೩೭೦ ಸ್ಥಾನ ಬರುತ್ತೆ, ಎನ್‌ಡಿಎ ಮೈತ್ರಿಗೆ ಬರೋಬ್ಬರಿ ೪೦೦ ಸ್ಥಾನ ಪಕ್ಕಾ ಅಂತ ಲೋಕಸಭೆಯಲ್ಲಿ ಸ್ವತಃ ಮೋದಿಯೇ ಹೇಳಿಕೊಂಡಿದ್ದರು. ಆದರೂ ಎನ್‌ಡಿಎಗೆ ಪ್ರಚಂಡ ಬಹುಮತ ಬರಬೇಕಾದ್ರೆ, ಉತ್ತರದಿಂದ ದಕ್ಷಿಣಕ್ಕೂ ಪ್ರಾಬಲ್ಯ ವಿಸ್ತರಿಸಬೇಕಾಗಿದೆ.ಬಿಜೆಪಿಗೆ ಬರೀ ಹಿಂದಿ ಬಾಹುಳ್ಯ ರಾಜ್ಯಗಳನ್ನು ಗೆದ್ದರೆ ಸಾಕು ಅಂದುಕೊAಡರೆ, ಯಕಚ್ಚಿತ್ ಬಿಜೆಪಿ ಅಧಿಕಾರವನ್ನು ಹಿಡಿಯಬಹುದು, ಮೋದಿ ಪ್ರಧಾನಿಯೂ ಆಗಬಹುದು. ಆದರೆ ಇದೀಗ ಪ್ರಶ್ನೆ ಅದಲ್ಲ, ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಯ ಸಂಖ್ಯಾಬಲ ೪೦೦ ದಾಟೋದು ಕಷ್ಟ.

ಉತ್ತರಭಾರತದಲ್ಲಿ ಬಲಿಷ್ಟವಾದ ನೆಲೆಯಂತೂ ಖಂಡಿತಾ ಇದೆ. ಅದರಲ್ಲೂ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಂತೂ ಮೋದಿ ಮತ್ತು ಯೋಗಿಯ ಜುಗಲ್ಭಂಧಿಯನ್ನು ತಡೆದು ನಿಲ್ಲಿಸೋದು ಕನಸ್ಸಿನಲ್ಲಿಯೂ ಕಷ್ಟ ಸಾಧ್ಯ... ಯಾಕಂದ್ರೆ ರಾಮಮಂದಿರ ಲೋಕಾರ್ಪಣೆ ಬಳಿಕ ಅಲ್ಲೊಂದು ಹೊಸ ಭಾವನಾತ್ಮಕ ಸೆಳೆದು ಹುಟ್ಟಿಕೊಂಡಿದೆ.ಒAದು ಕಡೆ ಯೋಗಿಯ ಪವರ್‌ಫುಲ್ ಆಡಳಿತ, ಮೋದಿಯ ಅಚ್ಚುಕಟ್ಟಾದ ಶಿಸ್ತಿನ ನಡವ ಳಿಕೆ, ಈ ಬಾರಿಯ ಲೋಕ ಅಖಾಡದಲ್ಲಿ ಅದರಲ್ಲೂ ಯುಪಿಯ ೮೦ ಲೋಕಸಭಾ ಕ್ಷೇತ್ರಗಳಲ್ಲಿ ಬಹುತೇಕ ಬಿಜೆಪಿಯ ಕೈಗೆ ಬಲ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ