ಮಗಳ ಜೊತೆಗೆ ಸಾವನ್ನಪ್ಪಿದ ತಾಯಿ

ಗುರುವಾರ, 8 ಆಗಸ್ಟ್ 2019 (18:29 IST)
ತಾಯಿ ಮತ್ತು ಮಗಳು ಜತೆಯಾಗಿಯೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮಗಳು ಹಾಗೂ ತಾಯಿ ಜತೆಯಾಗಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿದ್ಯುತ್ ತಂತಿ ತಗುಲಿ ತಾಯಿ - ಮಗಳು ಸಾವನ್ನಪ್ಪಿದ್ದಾರೆ.

ಜಾನುವಾರುಗಳು ನಿಲ್ಲುವ ಸ್ಥಳದಲ್ಲಿ ಜಲ್ಲಿಕಲ್ಲು ಹಾಕೋಕೆ ಅಂತ ತಾಯಿ -ಮಗಳು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನಪ್ಪಿದ್ದಾರೆ.

ಈ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿವನೂರು ಗ್ರಾಮದಲ್ಲಿ ನಡೆದಿದೆ. ಪಾರ್ವತಿ ರೂಪನೂರ (68) ತಾಯಿ, ಕೃಷ್ಣಾಬಾಯಿ ವಾಗ್ಮುಡೆ (48) ಮಗಳು ಮೃತ ದುರ್ದೈವಿಗಳಾಗಿದ್ದಾರೆ.

ಜಾನುವಾರು ನಿಲ್ಲುವ ಜಾಗ ಮಳೆಯಿಂದ ಕೆಸರಾಗಿದ್ದರಿಂದ ಜಲ್ಲಿ ತರಲು ಹೋಗಿದ್ದ ತಾಯಿ – ಮಗಳು ಜಲ್ಲಿಯ ಮೇಲೆ ಬಿದ್ದಿದ್ದ ತಂತಿಯನ್ನು ಸರಿಸಿದ್ದಾರೆ. ಆಗ ಸರಿಸುವಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ