ಸಿದ್ದರಾಮಯ್ಯರು ಮತ್ತೆ ಬ್ಲ್ಯಾಕ್‍ಮೇಲ್ ತಂತ್ರ ಅನುಸರಿಸಿದ್ದಾರೆ. ಮೊನ್ನೆ ಸೋನಿಯಾ ಗಾಂಧಿಯವರಿಗೆ ಫೋನ್ ಮಾಡಿ ತಮ್ಮನ್ನೇ ಸಿಎಂ ಮಾಡಬೇಕು. ಇಲ್ಲವಾದರೆ ತಮ್ಮ ದಾರಿ ತಾವು ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಅದಕ್ಕೆ ಹೈಕಮಾಂಡ್‍ಗೆ ಈ ಪರಿಸ್ಥಿತಿ ನಿಭಾಯಿಸಲು ಕಷ್ಟವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ಸಂಸತ್ತಿನ ಚುನಾವಣೆಗೆ ಮೊದಲು ಅವರು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಬೆದರಿಸಿದ್ದರು. ವಿರೋಧ ಪಕ್ಷದ ನಾಯಕ ಸ್ಥಾನ ಸಿಗದೆ ಇದ್ದರೆ ನನ್ನ ದಾರಿ ನನಗೆ ಎಂದು ಬೆದರಿಕೆ ಹಾಕಿದ್ದರು... ಕಾಂಗ್ರೆಸ್ ಪಕ್ಷಕ್ಕೆ ಅವರು ಕೊಟ್ಟಿದ್ದಕ್ಕಿಂತ ಪಡೆದುದೇ ಹೆಚ್ಚು ಎಂದು ತಿಳಿಸಿದರು.ಈಗ ಕಾಂಗ್ರೆಸ್ ಹೈಕಮಾಂಡ್ ಅಸಮರ್ಥ ಸ್ಥಿತಿಯಲ್ಲಿದೆ. ಸಮರ್ಥ ಹೈಕಮಾಂಡ್ ಇದ್ದರೆ ಇಷ್ಟು ಜನರ ಜೊತೆ ಮಾತುಕತೆ ಆಗುತ್ತಿರಲಿಲ್ಲ. ಹಿಂದೆ ಒಂದೇ ತೀರ್ಮಾನ ಇರುತ್ತಿತ್ತು. ಲಕೋಟೆ ಕಳಿಸುವ ನಾಯಕತ್ವ ಇತ್ತು ಎಂದರು.ಸುರ್ಜೇವಾಲಾ ನಮ್ಮ ಪಕ್ಷದ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ ಎಂದು ಗುಡುಗಿದ್ರು