ಕಾಂಗ್ರೆಸ್ ಸರ್ಕಾರದ ವಿರುದ್ದ ಹರಹಾಯ್ದ ಛಲವಾದಿ ನಾರಾಯಣಸ್ವಾಮಿ

ಗುರುವಾರ, 25 ಮೇ 2023 (19:42 IST)
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಬಿಜೆಪಿ ನಾಯಕರನ್ನು ಗುರಿಯಾಗಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ದೂರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಶ್ವಥ್ ನಾರಾಯಣ್, ಹರೀಶ್ ಪೂಂಜ ಮೇಲೆ ಹಿಂದಿನ ವಿಚಾರಕ್ಕೆ ಈಗ ಎಫ್ಐಆರ್ ಹಾಕಿದ್ದಾರೆ. ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಾ? ಕಾರ್ಯಕರ್ತರನ್ನು, ಮುಖಂಡರನ್ನು ಧಮಕಿ ಹಾಕಿ ಬಾಯಿ ಮುಚ್ಚಿಸ್ತೀರಾ? ಇಷ್ಟಕ್ಕೇ ಹೆದರಿಸಲು ಸಾಧ್ಯವಾ? ಕೆಲವು ರೌಡಿಗಳು ಪೊಲೀಸರಿಗೆ ಧಮಕಿ ಹಾಕುವುದನ್ನು ನೋಡಿದ್ದೇವೆ. ಅನುಭವಿ ಅಧಿಕಾರಿಗಳಿಗೆ ಧಮಕಿ ಹಾಕುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಅವರ ಬಾಯಿ ಮುಚ್ಚಿಸೋ ಕೆಲಸ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ. ಪೊಲೀಸ್ ಇಲಾಖೆಯ ಕೇಸರೀಕರಣ ಅಂತ ಹೇಳುತ್ತಿದ್ದೀರಿ. ಅವರು ಎಂದಾದ್ರೂ ಕೇಸರಿ ಡ್ರೆಸ್ ಹಾಕೋದನ್ನು ನೋಡಿದ್ರಾ? ಪೊಲೀಸರ ಮೇಲೆ ಹಗೆತನ ತೋರುವುದು ಸರಿಯಲ್ಲ. ನೀವು ಜನರನ್ನು ವಂಚಿಸಿ, ತೇಜೋವಧೆ ಮಾಡಿ ಮತ ಪಡೆಯುವ ಕೆಲಸ ಮಾಡಿದ್ದೀರಿ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ