ಕಬಿನಿ ಡ್ಯಾಮ್​​ ಭರ್ತಿಗೆ 2 ಅಡಿ ಬಾಕಿ

ಸೋಮವಾರ, 11 ಜುಲೈ 2022 (20:53 IST)
ಕಬಿನಿ ಭರ್ತಿಗೆ ಎರಡೇ ಅಡಿ ಬಾಕಿ ಇದ್ದು, ನದಿ ಪಾತ್ರದ ಜನರಿಗೆ ಆತಂಕ ಶುರುವಾಗಿದೆ. ಕೇರಳದ ವೈನಾಡುವಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಲಾಶಯ ತುಂಬಲು ಕೇವಲ ಎರಡೇ ಎರಡು ಅಡಿ ಬಾಕಿಯಾಗಿದೆ. ನದಿಪಾತ್ರದ ಗ್ರಾಮಗಳಲ್ಲಿ ಎದುರಾದ ಆತಂಕ ಎದುರಾಗಿದ್ದು, ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.ಜಲಾಶಯಕ್ಕೆ 28147 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, 23,750 ಕ್ಯೂಸೆಕ್ಸ್ ನೀರು ಕಬಿನಿಯಿಂದ ಹೊರಕ್ಕೆ ಬಿಡಲಾಗಿದೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284 ಅಡಿಯಾಗಿದ್ದು, ಇಂದಿನ ಮಟ್ಟ 2282.71 ನೀರು ಸಂಗ್ರಹವಾಗಿದೆ. ಕ್ಷಣಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಕಪಿಲಾ ನದಿ ಪಾತ್ರದಲ್ಲಿ ಆತಂಕ ಹಚ್ಚಿದೆ. ಹೀಗಾಗಿ ನಂಜನಗೂಡಿನ ಕಪಿಲಾ ಸ್ನಾನ ಘಟ್ಟ ಮುಳುಗುವ ಹಂತದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ