ಬೆಂಗಳೂರು: ಕಳೆದ ಎರಡು ದಿನಗಳಿಂದ ಕನ್ನಡಿಗರು ಹಣ ಟ್ರಾನ್ಸ್ ಫರ್ ಮಾಡುವ ಜನಪ್ರಿಯ ಫೋನ್ ಪೇ ಆಪ್ ನ್ನು ಬಹಿಷ್ಕರಿಸಲು ಶುರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಟ್ರೆಂಡ್ ಶುರುವಾಗಿದೆ.
ಇದಕ್ಕೆ ಕಾರಣ ಇತ್ತೀಚೆಗೆ ಫೋನ್ ಪೇ ಸಂಸ್ಥಾಪಕ ನೀಡಿದ ಒಂದು ಹೇಳಿಕೆ. ಅಷ್ಟಕ್ಕೂ ಆಗಿದ್ದೇನು ಇಲ್ಲಿ ನೋಡಿ. ಇತ್ತೀಚೆಗೆ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗೆ ಉದ್ಯೋಗ ಮೀಸಲಾಯಿ ಮಸೂದೆ ಪಾಸ್ ಮಾಡಿತ್ತು. ಇದರ ವಿರುದ್ಧ ಫೋನ್ ಪೇ ಸಂಸ್ಥಾಪಕ ಸಮೀರ್ ನಿಗಮ್ ಟ್ವೀಟ್ ಮಾಡಿದ್ದರು.
ಇಂತಹದ್ದೊಂದು ಮೀಸಲಾತಿ ತಂದರೆ ನನ್ನ ಮಕ್ಕಳಿಗೆ ಕರ್ನಾಟಕದಲ್ಲಿ ಕೆಲಸ ಮಾಡುವ ಯೋಗ್ಯತೆಯೇ ಇರಲ್ವಾ. ಇಂತಹದ್ದೊಂದು ಮೀಸಲಾತಿ ನಿಯಮ ಜಾರಿಗೆ ತಂದ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಸಮೀರ್ ಟೀಕಾ ಪ್ರಹಾರ ನಡೆಸಿದ್ದರು. ಇದು ಕನ್ನಡಿಗರನ್ನು ಕೆರಳಿಸಿದೆ.
ಇದೇ ಕಾರಣಕ್ಕೆ ಕೆಲವರು ಫೋನ್ ಪೇ ಆಪ್ ನ್ನು ತಮ್ಮ ಫೋನ್ ನಿಂದ ಅನ್ ಇನ್ ಸ್ಟಾಲ್ ಮಾಡುವ ಮೂಲಕ ಬಹಿಷ್ಕಾರದ ಅಭಿಯಾನಕ್ಕೆ ಕೈಜೋಡಿಸುತ್ತಿದ್ದಾರೆ. ಕನ್ನಡಿಗರ ಮೀಸಲಾತಿಯನ್ನು ವಿರೋಧಿಸಿದ ನಿಮ್ಮ ಆಪ್ ಕೂಡಾ ನಮ್ಮ ಫೋನ್ ನಲ್ಲಿ ಬೇಡ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಮೇತ ಬಹಿಷ್ಕಾರ ಮಾಡುತ್ತಿದ್ದಾರೆ.