ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಪ್ಲಾನ್ ನಡೆಸಿದ್ದು,ಹತ್ತು ಸಾವಿರ ಕಾರ್ಯಕರ್ತರು ಸೇರಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.ಕಾವೇರಿ ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನ ಪ್ರಧಾನಿ ಗಮನಸೆಳೆಯಲು ಕರವೆ ಪ್ಲಾನ್ ಮಾಡಿದೆ.ಪ್ರಧಾನಿ ಭೇಟಿಗೂ ಕರೆವೆಯಿಂದ ಪ್ಲಾನ್ ಕೂಡ ನಡೆಸಲಾಗಿದೆ.ಪ್ರಧಾನಿ ಭೇಟಿಗೆ ಅವಕಾಶ ಮಾಡಿಕೊಡುವಂತೆ ಪ್ರಹ್ಲಾದ್ ಜೋಷಿಗೆ ಕರವೇ ತಾಕೀತು ಮಾಡಿದೆ.ಕೇಂದ್ರ ಸರ್ಕಾರ ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಕರವೆಯಿಂದ ಆಗ್ರಹಿಸಿದೆ. ಈಗಾಗಲೇ ಕರವೆಯಿಂದ ರಕ್ತಪತ್ರ ಚಳುವಳಿ ಮಾಡಲಾಗಿದೆ.ಪ್ರಧಾನಿಗೆ ರಕ್ತದಲ್ಲಿ ಪ್ರತ ಬರೆಯುವ ಮೂಲಕ ಎಚ್ಚರಿಕೆ ಕರವೇಯಿಂದ ನೀಡಲಾಗಿದೆ.