ಹಂಪಿ ಉತ್ಸವದ ಮೇಲೆ ಬರದ ಕರಿನೆರಳು!
ವಿಶ್ವವಿಖ್ಯಾತ ಹಂಪಿ ಉತ್ಸವ ಎಂದರೆ ಅದರ ಸೊಬಗೇ ಬಲು ಸುಂದರ. ನಾಡಿನ ಜನರಿಗೆ ಅಷ್ಟೇ ಅಲ್ಲ, ಇದು ವಿದೇಶಿಗರಿಗೂ ಅಚ್ಚುಮೆಚ್ಚು. ಆದರೆ ಈ ಬಾರಿ ಹಂಪಿ ಉತ್ಸವ ಆಚರಿಸುವುದು ತುಸು ಅನುಮಾನ ಮೂಡಿಸಿದೆ.
ಬಳ್ಳಾರಿಯ ಎಲ್ಲ ತಾಲೂಕುಗಳನ್ನು ಸರಕಾರ ಈಗಾಗಲೇ ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದೆ. ಹೀಗಾಗಿ ಬರದ ಛಾಯೆ ಉತ್ಸವದ ಬೀಳುವ ಲಕ್ಷಣ ಕಂಡು ಬರುತ್ತಿದೆ.
ಬಳ್ಳಾರಿಯಲ್ಲಿ ಮಾತನಾಡಿರುವ ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಇಂತಹ ಸಂದರ್ಭದಲ್ಲಿ ಹಂಪಿ ಉತ್ಸವ ಆಚರಣೆ ಮಾಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ. ಆ ಮೂಲಕ ಈ ಬಾರಿ ಹಂಪಿ ಉತ್ಸವ ನಡೆಯುವುದು ಅನುಮಾನ ಮೂಡಿಸಿದಂತಾಗಿದೆ.