Bird flue: ಹಕ್ಕಿ ಜ್ವರವಿರುವಾಗ ಮೊಟ್ಟೆ ಸೇವನೆ ಸುರಕ್ಷಿತವೇ

Krishnaveni K

ಶನಿವಾರ, 1 ಮಾರ್ಚ್ 2025 (16:26 IST)
ಬೆಂಗಳೂರು: ಕರ್ನಾಟಕದಲ್ಲಿ ಈಗ ಹಕ್ಕಿ ಜ್ವರ ಭೀತಿ ಶುರುವಾಗಿದ್ದು, ಸಾಕಷ್ಟು ಕೋಳಿಗಳು ಸಾವನ್ನಪ್ಪಿರುವ ವರದಿಯಾಗಿದೆ. ಇದೀಗ ಹಕ್ಕಿ ಜ್ವರವಿರುವಾಗ ಮೊಟ್ಟೆ ಸೇವನೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

ಕರ್ನಾಟಕದ ಗಡಿ ಜಿಲ್ಲೆ ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಸಾಕಷ್ಟು ಕೋಳಿಗಳು ಸಾವನ್ನಪ್ಪಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಹರಡುವ ಭೀತಿ ಆವರಿಸಿದೆ. ರಾಜ್ಯಾದ್ಯಂತ ಚಿಕನ್ ಉತ್ಪನ್ನಗಳ ಮಾರಾಟ, ಸಾಗಣೆಗೆ ನಿಷೇಧ ಹೇರಲಾಗಿದೆ.

ಈ ನಡುವೆ ಮೊಟ್ಟೆ ಸೇವಿಸಲೂ ಜನ ಹಿಂದೇಟು ಹಾಕುವಂತಾಗಿದೆ. ಆದರೆ ಹಕ್ಕಿ ಜ್ವರ ಹಿನ್ನಲೆಯಲ್ಲಿ ಮೊಟ್ಟೆ ಸೇವನೆ ಮಾಡುವುದಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ ಚಿಕನ್ ಉತ್ಪನ್ನಗಳನ್ನು ಸೇವಿಸುವ ಮುನ್ನ ಎಚ್ಚರಿಕೆ ಅಗತ್ಯ.

ಹಕ್ಕಿ ಜ್ವರ ಹರಡದಂತೆ ಕೋಳಿಗಳನ್ನು ಹಿಡಿಯುವುದೇ ಅಧಿಕಾರಿಗಳಿಗೆ ಸವಾಲಾಗಿದೆ. ಹಲವೆಡೆ ಸಾಮೂಹಿಕವಾಗಿ ಕೋಳಿಗಳನ್ನು ಹತ್ಯೆ ಮಾಡಲಾಗಿದೆ. ಜನರಿಗೆ ಹಕ್ಕಿ ಜ್ವರದ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಹಕ್ಕಿ ಜ್ವರದ ಬಗ್ಗೆ ಭಯ ಬೇಡ, ಆದರೆ ಎಚ್ಚರಿಕೆಯಿರಲಿ ಎಂದು ಸಂದೇಶ ನೀಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ