CET Results live: ಕೆಲವೇ ಕ್ಷಣಗಳಲ್ಲಿ ಸಿಇಟ ಫಲಿತಾಂಶ: ಎಲ್ಲಿ, ಹೇಗೆ ಚೆಕ್ ಮಾಡಬೇಕು ಇಲ್ಲಿದೆ ವಿವರ

Krishnaveni K

ಶನಿವಾರ, 24 ಮೇ 2025 (09:13 IST)
ಬೆಂಗಳೂರು: ಇನ್ನು ಕೆಲವೇ ಕ್ಷಣಗಳಲ್ಲಿ ಈ ಸಾಲಿನ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಎಲ್ಲಿ, ಹೇಗೆ ಫಲಿತಾಂಶ  ವೀಕ್ಷಿಸಬೇಕು ಇಲ್ಲಿದೆ ವಿವರ.

ಇಂದು 11.30 ಗಂಟೆಗೆ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಅಧಿಕೃತವಾಗಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಿದ್ದಾರೆ. ಅದಾದ ಬಳಿಕ ವೆಬ್ ಸೈಟ್ ಮೂಲಕ ಪರೀಕ್ಷೆ ಫಲಿತಾಂಶ ವೀಕ್ಷಣೆ ಮಾಡಬಹುದಾಗಿದೆ. ಹಾಗಿದ್ರೆ ಫಲಿತಾಂಶ ಎಲ್ಲಿ ವೀಕ್ಷಿಸಬೇಕು, ಬೇಕಾಗುವ ದಾಖಲೆಗಳು ಏನು ಎಂಬ ವಿವರ ಇಲ್ಲಿದೆ ನೋಡಿ.

kea.kar.nic.in ಅಥವಾ cetonline.karnataka.gov.in ವೆಬ್ ಸೈಟ್ ನಲ್ಲಿ ನಿಮ್ಮ ವಿವರಗಳನ್ನು ನೀಡಿ ಫಲಿತಾಂಶ ವೀಕ್ಷಿಸಬಹುದು. ಮಧ್ಯಾಹ್ನ 2 ಗಂಟೆಯ ನಂತರ ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಣೆಗೆ ಲಭ್ಯವಿರತ್ತದೆ.

ಫಲಿತಾಂಶ ವೀಕ್ಷಿಸುವ ಪ್ರಕ್ರಿಯೆ ಇಲ್ಲಿದೆ
-ಮೊದಲು cetonline.karnataka.gov.in ವೆಬ್ ಸೈಟ್ ತೆರೆಯಿರಿ
-ಇಲ್ಲಿ ಕೆಸಿಇಟಿ ಫಲಿತಾಂಶಗಳು 2025 ಆಯ್ಕೆ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿ
-ಅಲ್ಲಿ ಕಾಣುವ ಸ್ಥಳದಲ್ಲಿ ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರ ಮತ್ತು ಕೆಸಿಇಟಿ ನೋಂದಣಿ ಸಂಖ್ಯೆಯನ್ನು ಭರ್ತಿ ಮಾಡಿ ಸಬ್ ಮಿಟ್ ಕೊಡಿ.
-ಈಗ ನಿಮ್ಮ ಫಲಿತಾಂಶ ಪರದೆ ಮೇಲೆ ಕಂಡುಬರುತ್ತದೆ.
-ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ