Lorry strike: ಇಂದು ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ ಆರಂಭ: ಈ ಅಗತ್ಯವಸ್ತುಗಳನ್ನು ಇಂದೇ ದಾಸ್ತಾನು ಮಾಡಿ

Krishnaveni K

ಸೋಮವಾರ, 14 ಏಪ್ರಿಲ್ 2025 (12:48 IST)
ಬೆಂಗಳೂರು: ಡೀಸೆಲ್ ಮೇಲಿನ ಸುಂಕ ಏರಿಕೆ ಮಾಡಿರುವ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ರಾಜ್ಯ ಲಾರಿ ಮಾಲಿಕರು ಇಂದು ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಹೀಗಾಗಿ ಈ ಅಗತ್ಯವಸ್ತುಗಳನ್ನು ಇಂದೇ ದಾಸ್ತಾನು ಮಾಡಿಟ್ಟುಕೊಳ್ಳಿ.

ಇತ್ತೀಚೆಗೆ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಸುಂಕ ಹೆಚ್ಚಿಸಿರುವುದರಿಂದ ಪ್ರತೀ ಲೀಟರ್ ಡೀಸೆಲ್ ಬೆಲೆ 2 ರೂ.ಗಳಷ್ಟು ಹೆಚ್ಚಾಗಿತ್ತು. ಇದರ ಬಿಸಿ ವಿಶೇಷವಾಗಿ ಲಾರಿ ಮಾಲಿಕರನ್ನು ತಟ್ಟಿದೆ. ಅದರಲ್ಲೂ ಸರಕು ಸಾಗಣೆ ಲಾರಿಗಳಿಗೆ ಇದು ಹೆಚ್ಚುವರಿ ಹೊರೆಯಾಗಿದೆ.

ಹೀಗಾಗಿ ಸರ್ಕಾರದ ವಿರುದ್ಧ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದಾಗಿ ಹೊರ ರಾಜ್ಯಗಳಿಗೆ ಹೋಗುವ ಮತ್ತು ಹೊರರಾಜ್ಯಗಳಿಂದ ರಾಜ್ಯಕ್ಕೆ ಬರುವ ಸರಕು ಸಾಗಣೆ ಲಾರಿಗಳು ಸ್ಥಗಿತವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ