ಕರ್ನಾಟಕ ಹವಾಮಾನ: ಇಂದಿನಿಂದ ಈ ದಿನದವರೆಗೆ ಭಾರೀ ಚಳಿ, ಈ ಟಿಪ್ಸ್ ಪಾಲಿಸಿ

Krishnaveni K

ಶುಕ್ರವಾರ, 10 ಜನವರಿ 2025 (10:49 IST)
ಬೆಂಗಳೂರು: ಇಂದಿನಿಂದ ನಾಲ್ಕು ದಿನಗಳವರೆಗೆ ಕರ್ನಾಟಕದಲ್ಲಿ ಭಾರೀ ಚಳಿಯ ವಾತಾವರಣ ಕಂಡುಬರಲಿದೆ. ಈ ವೇಳೆ ಕೆಲವೊಂದು ಟಿಪ್ಸ್ ಪಾಲಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಹವಾಮಾನ ಇಲಾಖೆ ವರದಿ ಪ್ರಕಾರ ಇಂದಿನಿಂದ ನಾಲ್ಕು ದಿನಗಳವರೆಗೆ ರಾಜ್ಯದ ಕೆಲವು ಭಾಗಗಳಲ್ಲಿ ದಾಖಲೆಯ ತಾಪಮಾನ ಇಳಿಕೆ ಕಂಡುಬರಲಿದೆ. ಪರಿಣಾಮ ವಿಪರೀತ ಚಳಿ, ಮೋಡ ಕವಿದ ವಾತಾವರಣ ಕಂಡುಬರಲಿದೆ.

ಬೀದರ್, ಗದಗ, ಕಲಬುರಗಿಯಲ್ಲಂತೂ ತಾಪಮಾನ ಕನಿಷ್ಠ ಮಟ್ಟಕ್ಕಿಳಿಯಲಿದೆ. ಬೆಂಗಳೂರಿನಲ್ಲೂ ನಿನ್ನೆ ಸಂಜೆಯಿಂದ ಮೋಡ ಕವಿದ ವಾತಾವರಣವಿದ್ದು ವಿಪರೀತ ಚಳಿಯಿದೆ. ಈ ವಾತಾವರಣ ಇನ್ನೂ ನಾಲ್ಕು ದಿನ ಮುಂದುವರಿಯಲಿದೆ.

ನಾಲ್ಕು ದಿನ ಇರಲಿ ಎಚ್ಚರ
ವಿಪರೀತ ಚಳಿಯ ಹಿನ್ನಲೆಯಲ್ಲಿ ಈ ನಾಲ್ಕು ದಿನ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆಯಿಂದಿರುವುದು ಮುಖ್ಯ. ಅದರಲ್ಲೂ ವಿಶೇಷವಾಗಿ ಮಕ್ಕಳು, ವಯೋವೃದ್ಧರು ಬೆಳಿಗ್ಗಿನ ಜಾವ ಮತ್ತು ಸಂಜೆ ಮನೆಯೊಳಗೇ ಬೆಚ್ಚಗಿರುವುದು ಉತ್ತಮ. ಇನ್ನೇನು ಎರಡೇ ದಿನಗಳಲ್ಲಿ ಸಂಕ್ರಾಂತಿ ಬರಲಿದ್ದು, ವೀಕೆಂಡ್ ರಜೆ ಎಂದು ಸುತ್ತಾಡುವಾಗ ಎಚ್ಚರಿಕೆಯಿರಲಿ.

ವಿಪರೀತ ಚಳಿ, ಮೋಡ ಕವಿದ ವಾತಾವರಣದಿಂದ ಶೀತ ಸಂಬಂಧೀ ಆರೋಗ್ಯ ಸಮಸ್ಯೆ ಎದುರಾಗಬಹುದು. ಈ ಹಿನ್ನಲೆಯಲ್ಲಿ ಆಗಾಗ ಬಿಸಿ ನೀರಿನ ಸೇವನೆ ಮಾಡುತ್ತಿರಿ. ಆದಷ್ಟು ಸಂಜೆ ವೇಳೆ ಹೊರಗೆ ಸುತ್ತಾಡುವುದು ಕಡಿಮೆ ಮಾಡಿ. ಶಾಲೆಗೆ ಹೋಗುವ ಮಕ್ಕಳೂ ಆದಷ್ಟು ಗಾಳಿಯಾಡದಂತೆ ಎಚ್ಚರಿಕೆಯಿಂದ ಹೋದರೆ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ