ಶಾಲಾ ಮಕ್ಕಳನ್ನು ರಾಜಕೀಯದಿಂದ ದೂರ ಇಡಿ

ಶನಿವಾರ, 23 ಡಿಸೆಂಬರ್ 2023 (18:22 IST)
ಸಿದ್ದರಾಮಯ್ಯ ಹಿಜಾಬ್ ವಿಚಾರದಲ್ಲಿ ಬೇಜಾವ್ದಾರಿ ಹೇಳಿಕೆ‌ ನೀಡಿದ್ದಾರೆ ಅಂತಾ ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದ್ದಾರೆ. ಶಿಕ್ಷಣ ಕಲುಷಿತ ಗೊಳಿಸಲು ಕೈ ಹಾಕಿರುವುದು ನಾಡಿನ ದುರಾದೃಷ್ಟ.

ಸಿಎಂ ಅವರಿಂದ ಈ ಹೇಳಿಕೆ‌ ನಾನು ನಿರೀಕ್ಷೆ ಮಾಡಿರಲಿಲ್ಲ. ಶಾಲಾ ಮಕ್ಕಳನ್ನು ರಾಜಕೀಯದಿಂದ ದೂರ ಇಡಬೇಕಿತ್ತು, ಕೊಳಕು ರಾಜಕೀಯದಿಂದ ದೂರ ಇಡಬೇಕಿತ್ತು. ಪರೀಕ್ಷೆಗೆ ಹೋಗುವವರಿಗೆ ತಾಳಿ, ಕಾಲುಂಗರ ಬಿಚ್ಚಿಸುತ್ತಾರೆ. ಇದು ತಲೆ ತಗ್ಗಿಸುವಂತಹ ವಿಚಾರ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದ್ರೂ ಅಲ್ಪಸಂಖ್ಯಾತರು ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಶೇ 50ಕ್ಕಿಂತ ಹೆಚ್ಚು ಶಿಕ್ಷಣಕ್ಕಿಂತ ವಂಚಿತರಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರಣ ಅಲ್ವಾ.‌? ಅಲ್ಪಸಂಖ್ಯಾತರನ್ನು ಕೇವಲ ಓಟ್ ಬ್ಯಾಂಕ್ ಗೆ ಬಳಸಿಕೊಳ್ಳಲಾಗಿದೆ. ದೇಶದ ಪ್ರಧಾನಿ ಮೋದಿಯವ್ರು ತ್ರಿಬಲ್ ತಲಾಕ್ ಕಿತ್ತು ಹಾಕಿದ್ರು. ನೀವೇನು ಮಾಡಿದ್ರಿ.. ಉದ್ದುದ್ದ ಭಾಷಣ ಮಾಡ್ತಿರಾ..? ಅಲ್ಪಸಂಖ್ಯಾತರ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ನವರು. ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಪಕ್ಷ ಸೋಲು ಕಾಣಲಿದೆ ಅಂತಾ ಕಾಂಗ್ರೆಸ್​​​ ವಿರುದ್ಧ ಆಕ್ರೋಶ ಹೊರಹಾಕಿದ್ರು .

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ