ಪಾಲಿಕೆಯಿಂದ ವ್ಯಾಪಾರಿಗಳಿಗೆ ಖಡಕ್ ಸಂದೇಶ

geetha

ಭಾನುವಾರ, 14 ಜನವರಿ 2024 (14:00 IST)
ಬೆಂಗಳೂರು-ಕನ್ನಡ ನಾಮಫಲಕ ಶೇಕಡಾ ೬೦ ರಷ್ಟು ಅಳವಡಿಕೆ ವಿಚಾರವಾಗಿ ಪಾಲಿಕೆಯಿಂದ ವ್ಯಾಪಾರಿಗಳಿಗೆ  ಖಡಕ್ ಸಂದೇಶ ನೀಡಲಾಗಿದೆ.ನಾಮಫಲಕದಲ್ಲಿ ಶೇಕಡಾ 60 ರಷ್ಟು ಕನ್ನಡ ಭಾಷೆ ಬಳಕೆ ಮಾಡಿ.ಇಲ್ಲವಾದ್ರೆ ಮಳಿಗೆಗೆ ನೀಡಿದ ಲೈಸೆನ್ಸ್ ರದ್ದು ಮಾಡಲಾಗುತ್ತೆ.ಇನ್ನೂ ಫೆಬ್ರವರಿ 28 ರವರೆಗೆ ಪಾಲಿಕೆ ಟೈಮ್ ನೀಡಿದೆ.
 
ಈಗಾಗಲೇ 18,886 ಮಳಿಗೆಗಳಿಗೆ ಬಿಬಿಎಂಪಿ ನೋಟೀಸ್ ನೀಡಿದೆ.ಕೊಟ್ಟಿರೋ ಟೈಮ್ ಒಳಗೆ ನಾಮಫಲಕದಲ್ಲಿ ಕನ್ನಡ ಕಡ್ಡಾಯ ಮಾಡಬೇಕು.ಇಲ್ಲವದ್ರೆ ಉದ್ದಿಮೆ ಮುಚ್ಚುವುದಾಗಿ ಎಚ್ಚರಿಕೆ ನೀಡಲಾಗಿದೆ.ಈ ಪೈಕಿ ಮಹದೇವಪುರ. ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚು ನೋಟೀಸ್ ಬಿಬಿಎಂಪಿ ನೀಡಿರುವುದಾಗಿ ಇಂದು ನಗರದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ
 
ವಲಯವರು ನಾಮಫಲಕ ಸಂಬಂಧಿಸಿದಂತೆ ನೋಟೀಸ್ ನೀಡಿರೋ ವಿವರಗಳನ್ನು ನೋಡೋದದ್ರೆ -
 
ದಕ್ಷಿಣ - 2838
ಪೂರ್ವ -2477
ಬೊಮ್ಮನಹಳ್ಳಿ- 3881
ದಾಸರಹಳ್ಳಿ- 1378
ಮಹದೇವಪುರ- 3442
ಪಶ್ಚಿಮ - 2718
ಯಲಹಂಕ -1828
ಆರ್ ಆರ್ ನಗರ - 324
ಒಟ್ಟು - 18886
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ