ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗೋದನ್ನು ತಪ್ಪಿಸಿದ್ದು ದೇವೇಗೌಡ್ರು: ಕೆಎನ್ ರಾಜಣ್ಣ

Krishnaveni K

ಶನಿವಾರ, 15 ಫೆಬ್ರವರಿ 2025 (14:46 IST)
ಬೆಂಗಳೂರು: ಎಲ್ಲಾ ಸರಿ ಹೋಗಿದ್ರೆ 2004 ರಲ್ಲೇ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು. ಆದರೆ ಅದನ್ನು ತಪ್ಪಿಸಿದ್ದು ದೇವೇಗೌಡ್ರು ಎಂದು ಕೆನ್ ರಾಜಣ್ಣ ಹೇಳಿದ್ದಾರೆ.

ದಲಿತ ಸಿಎಂ ಆಗಬೇಕು ಎಂದು ಧ್ವನಿಯೆತ್ತಿರುವ ಕೆಎನ್ ರಾಜಣ್ಣ ಮಾಧ್ಯಮಗಳ ಮುಂದೆ ಈ ವಿಚಾರ ಮಾತನಾಡಿದ್ದಾರೆ. ಈ ಮೊದಲೇ ಖರ್ಗೆ ಸಿಎಂ ಆಗಬೇಕಿತ್ತು. ಆಗ ಎಸ್ ಎಂ ಕೃಷ್ಣ ಬಂದು ಅವರಿಗೆ ತಪ್ಪಿ ಹೋಗಿತ್ತು. ಅದಾದ ಮೇಲೆ 2004 ರಲ್ಲಿ ಮತ್ತೆ ಅವಕಾಶವಿತ್ತು.

ಆದರೆ ಆಗ ದೇವೇಗೌಡರು ತಪ್ಪಿಸಿದ್ರು. ಆವತ್ತು ದೇವೇಗೌಡರ ಬೆಂಬಲವಿಲ್ಲದೇ ಸರ್ಕಾರ ರಚನೆ ಸಾಧ್ಯವಿರಲಿಲ್ಲ. ದೇವೇಗೌಡ್ರು ತುಂಬಾ ಮುಂದಾಲೋಚನೆ ಮಾಡಿದ್ದರು. ಖರ್ಗೆ ಬಂದರೆ ಮುಂದೆ ಅವರನ್ನು ಕಿತ್ತು ಹಾಕಲು ಸಾದ್ಯವಿಲ್ಲ ಎಂದು ಪಾಪದ ಧರ್ಮಸಿಂಗ್ ಆಗಬಹುದು ಎಂದರು.

ಧರ್ಮಸಿಂಗ್ ರನ್ನು ತಮಗೆ ಬೇಕಾದಂತೆ ನಡೆಸಿಕೊಂಡರು. ಇದೆಲ್ಲಾ ರಾಜಕೀಯದಲ್ಲಿ ನಡೆಯುತ್ತಿರುತ್ತದೆ ಎಂದಿರುವ ಕೆಎನ್ ರಾಜಣ್ಣ ದಲಿತರಿಗೂ ಸ್ಥಾನ ಮಾನ ಸಿಗಬೇಕಲ್ಲ, ಹೀಗಾಗಿ ದಲಿತರಿಗೆ ಸಿಎಂ ಸ್ಥಾನ ಸಿಗಲಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ