ಸರಕಾರದ ಲೋಪ ಕುರಿತು ಹೇಳೋದಿಲ್ಲ ಅಂದ ಕುಮಾರಸ್ವಾಮಿ

ಭಾನುವಾರ, 18 ಆಗಸ್ಟ್ 2019 (21:31 IST)
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾಜಿ ಸಿಎಂ ವಿಶೇಷ ಪೂಜೆ ನೆರವೇರಿಸಿದ್ದಾರೆ.  ಇದೇ ವೇಳೆ ಸಂತ್ರಸ್ಥರನ್ನು ಭೇಟಿ ಮಾಡಿರೋ ಅವರು, ಬಿಜೆಪಿ ಸರಕಾರದ ಲೋಪ ಬಗ್ಗೆ ಹೆಳೋದೇ ಇಲ್ಲ ಅಂದಿದ್ದಾರೆ.

ರಾಜ್ಯದ ನೆರೆ ಸಂತ್ರಸ್ತರನ್ನು ಭೇಟಿ ಮಾಡುತ್ತಿದ್ದೇನೆ. ರಾಜ್ಯದ ಹಲವು ಕಡೆಗಳಲ್ಲಿ ಅನಾಹುತಗಳಾಗಿವೆ.
ಇವತ್ತು ಬೆಳ್ತಂಗಡಿ ಭಾಗದಲ್ಲಿ ನಾನು ಪ್ರವಾಸ ಮಾಡುತ್ತಿದ್ದೇನೆ. ಜೆಡಿಎಸ್‍ ಪಕ್ಷದ ವತಿಯಿಂದ ಪರಿಹಾರ ಕಲ್ಪಿಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಸಣ್ಣ ಮಟ್ಟದ ಸಹಾಯ ಮಾಡಲು ಮುಂದಾಗಿದ್ದೇವೆ ಅಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸಂತ್ರಸ್ತರ ನೋವನ್ನು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ. 14 ತಿಂಗಳ ಕಾಲ ಮೈತ್ರಿ ಸರ್ಕಾರ ಆಡಳಿತದಲ್ಲಿತ್ತು. ನಮ್ಮ ಅವಧಿಯಲ್ಲಿ ಉತ್ತಮ ಯೋಜನೆಗಳನ್ನು ಕೊಟ್ಟಿದ್ದೇವೆ. ಕೆಲವೊಂದು ಕೆಲಸಗಳು ಆಗಿಲ್ಲ ಎನ್ನುವುದು ನಿಜ. ಸಿಎಂ ಯಡಿಯೂರಪ್ಪ ಐದು ಲಕ್ಷ ಕೊಡುತ್ತೇವೆ ಎಂದು ಘೋಷಿಸಿದ್ದಾರೆ. ನಷ್ಟದ ಮಾಹಿತಿ ಪಡೆದು ಸರ್ಕಾರ ಶಾಶ್ವತ ಪರಿಹಾರ ಕೊಡಲಿ. ನಾನು ಸರ್ಕಾರದ ಲೋಪ ದೋಷಗಳ ಬಗ್ಗೆ ಮಾತನಾಡುವುದಕ್ಕೆ ಹೋಗಲ್ಲ ಅಂತದ್ರು.

ಜನರ ನೋವು, ಬವಣೆಯನ್ನು ತಿಳಿಯುವ ಪ್ರಯತ್ನ ಸರ್ಕಾರ ಮಾಡಲಿ. 60,000 ಕೋಟಿಗಿಂತಲೂ ಹೆಚ್ಚು ನೆರೆ, ಪ್ರವಾಹದಿಂದ ನಷ್ಟ ಆಗಿದೆ. ಯುಪಿಎ ಆಡಳಿತದಲ್ಲಿದ್ದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಆವಾಗ ಯುಪಿಎ ಒಂದು ಸಾವಿರ ಕೋಟಿ ಬಿಡುಗಡೆ ಮಾಡಿತ್ತು. ಈಗ ಕೇಂದ್ರದಲ್ಲಿ ಬಿಜೆಪಿ ಇದ್ದರೂ ಯಡಿಯೂರಪ್ಪಗೆ ಸಹಾಯ ಮಾಡಿಲ್ಲ.

ಕೇಂದ್ರ ಸರ್ಕಾರವೇ ಯಾಕೆ ಹಿಂದೇಟು ಹಾಕುತ್ತಿದೆ ಎಂದು ಧರ್ಮಸ್ಥಳದಲ್ಲಿ ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ