ಹೊಸ ಸರ್ಕಾರ ಬಂದ ಬಳಿಕ ಪಠ್ಯಪುಸ್ತಕ ಪರಿಷ್ಕರಣೆ ಬಹಳ ಸದ್ದು ಮಾಡ್ತಿದೆ. ಕೆಲ ಸಾಹಿತಿಗಳು ಸಿಎಂ ಹಾಗೂ ಶಿಕ್ಷಣ ಸಚಿವರ ಹಿಂದೆ ಮುಂದೆ ತಿರುಗುತ್ತಿದ್ದಾರೆ. ಅವರ ಸಾಹಿತ್ಯ ತುರುಕುವ ಕೆಲಸ ಮಾಡಲಾಗ್ತಿದೆ. ಅದರ ಬಗ್ಗೆ ಎಚ್ಚರಿಕೆ ಇಂದ ಇರಿ ಎಂದು MLC ನಾರಾಯಣಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅನೇಕರು ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ರು. ಅವರಿಂದ ಸಲಹೆ ಪಡೆಯಿರಿ. ಕೆಲವರು ಮಾತು ಕಟ್ಟಿಕೊಂಡು ಈ ರೀತಿ ಹೆಜ್ಜೆ ಇಡಬೇಡಿ. ಇದು ನಿಮಗೆ ಸಂಕಷ್ಟ ತರಲಿದೆ. ಈಗಾಗಲೇ ಪಠ್ಯ ಶಾಲೆಗೆ ತಲುಪಿದೆ.ಒಳ್ಳೆಯ ಸಮಾಜ ನಿರ್ಮಾಣಕ್ಕೆ ಏನೆಲ್ಲಾ ಪಠ್ಯ ಕೊಡಬಹುದು ಅಂತ ನಿಮ್ಮ ಸಚಿವರ ಸಲಹೆ ಪಡೆಯಿರಿ ಅಂತ ಮನವಿ ಮಾಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಬಹಳಷ್ಟು ಹುದ್ದೆ ಖಾಲಿ ಇದೆ. ಹಿಂದಿನ ಸರ್ಕಾರ 15 ಸಾವಿರ ಹುದ್ದೆ ಭರ್ತಿ ಮಾಡಲು ತಯಾರಿ ಮಾಡಿತ್ತು. ಟೆಕ್ನಿಕಲ್ ಇಶ್ಯು ಇದ್ದ ಕಾರಣ ಸ್ಥಗಿತವಾಗಿತ್ತು ಎಂದರು.