ಜೋಡೋ ಯಾತ್ರೆಯಿಂದ ಹೆದರಿ ಸದಸ್ಯತ್ವ ರದ್ದು : ಸಿದ್ದರಾಮಯ್ಯ

ಭಾನುವಾರ, 26 ಮಾರ್ಚ್ 2023 (06:16 IST)
ಚಿಕ್ಕಬಳ್ಳಾಪುರ : ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಿಂದ ಹೆದರಿ ಸಂಸದ ಸ್ಥಾನ ಅನರ್ಹಗೊಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಾಸಕ ಎನ್.ಎಚ್ ಶಿವಶಂಕರ ರೆಡ್ಡಿಯವರ ಪರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ಜೋಡೋ ಯಾತ್ರೆ ನಂತರ ರಾಹುಲ್ ಗಾಂಧಿ ವರ್ಚಸ್ಸು ಜಾಸ್ತಿ ಆಗಿತ್ತು. ಹಾಗಾಗಿ ಅವರಿದ್ದರೆ ಟೀಕೆ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಸದಸ್ಯತ್ವ ತೆಗೆದಿದ್ದಾರೆ ಎಂದು ಗುಡುಗಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಬದಲು ರಾಜೀವ್ ಗಾಂಧಿ ಎಂದು ಬಾಯಿ ತಪ್ಪಿದರು. 

ದೇಶದಲ್ಲಿ ಮಲ್ಯ-ಮೋದಿ ದೇಶದ ದುಡ್ಡು ಕೊಳ್ಳೆ ಹೊಡೆದು ಹೋಗಿದ್ದಾರೆ. ಅವರನ್ನು ಕಳ್ಳರು ಅನ್ನೋದು ತಪ್ಪಾ? ಅದಕ್ಕಾಗಿ ಸದಸ್ಯ ಸ್ಥಾನದಿಂದ ತೆಗೆದು ಹಾಕಿದ್ದು ಸರಿಯೇ? ಟೀಕೆ ಮಾಡುವವರನ್ನ ಮುಗಿಸೋ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ