ಹೆಚ್ಚು ಸ್ಥಾನ ಗೆಲ್ಲಬೇಕೆಂದು ಹೇಳಿದ್ದಾರೆ-ಸಚಿವ ಡಾ.ಜಿ.ಪರಮೇಶ್ವರ್

geetha

ಶುಕ್ರವಾರ, 12 ಜನವರಿ 2024 (15:20 IST)
ಬೆಂಗಳೂರು : ದೆಹಲಿಯಲ್ಲಿ ಲೋಕಸಭಾ ಸಿದ್ದತೆ ಕುರಿತ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಯಾವ ರೀತಿ BLA ಮಾಡಬೇಕು, ಪಂಚಾಯತಿ ‌ಮಟ್ಟದಲ್ಲಿ ಹೇಗೆ ಸಮಿತಿ ಮಾಡಬೇಕು, ಅಭ್ಯರ್ಥಿಗಳ ಆಯ್ಕೆ ಆದ್ಮೆಲೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಚರ್ಚೆ ಆಗಿದೆ. ಹಿಂದೆ ವೀಕ್ಷಕರನ್ನು ನೇಮಿಸುತ್ತಿದ್ದರು, ಈಗ ಸಂಯೋಜಕರನ್ನು ನೇಮಿಸಿದ್ದಾರೆ.

ವಾರ್ ರೂಮ್ ಅಂತ ಇರೋದನ್ನು ಈಗ ಕನೆನ್ಟ್ ಸೆಂಟರ್ಸ್ ಅಂತ ಮಾಡಿದ್ದಾರೆ. ಸಭೆಯಲ್ಲಿ ಏನು ಮಾಡಬೇಕು, ಏನು ನಿರೀಕ್ಷೆ ಮಾಡುತ್ತೇವೆ ಎಂಬುದನ್ನ ಹೇಳಿದ್ದಾರೆ. ಕಳೆದ ಬಾರಿ 1 ಕ್ಷೇತ್ರ ಗೆದ್ದಿದ್ದಾರೆ. ಇನ್ನೂ ಹೆಚ್ಚು ಸ್ಥಾನ ಗೆಲ್ಲಬೇಕು. ಹಿಂದೆ ಒಮ್ಮೆ 27 ಸ್ಥಾನ ಗೆದ್ದಿದ್ದೆವು ಎಂದು ತಿಳಿಸಿದ್ದಾರೆ.

ಹಾವೇರಿ ನೈತಿಕ ಪೊಲೀಸಗಿರಿ ವೇಳೆ ಸಾಮೂಹಿಕ ರೇಪ್ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಮೊದಲೇ ಅವರು ದೂರು ಕೊಟ್ಟಿಲ್ಲ. ನಂತರ ಹಾಗೇ ದೂರು ಕೊಟ್ಟಿದ್ದಾರೆ. ಅವರನ್ನು ಅಗಲೇ ಅರೆಸ್ಟ್ ಮಾಡಿದ್ದಾರೆ. ದೂರು ಕೊಟ್ಟಿದ್ದು ಸುಳ್ಳಾ, ಇಲ್ಲವಾ ಅನ್ನೋದನ್ನ ನೋಡಿ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಇಂತಹ ಪ್ರಕರಣದಲ್ಲಿ ನಿರ್ಲಕ್ಷ್ಯ ಮಾಡಲ್ಲ. ಶಿರಸಿಯಿಂದ ಬಂದು ಅಲ್ಲಿ ರೂಮ್ ಮಾಡಿದ್ರು, ಬೇರೆಯವರ ಜೊತೆ ಅನೈತಿಕವಾಗಿ ಇದ್ರು ಅಂತ ಗಲಾಟೆ ಮಾಡಿದ್ದಾರೆ. ಗಲಾಟೆ ಮಾಡೋವಾಗ ನಮಗೆ ರೇಪ್ ಮಾಡಿದ್ದಾರೆ ಅಂತ ಆಮೇಲೆ ದೂರು ಕೊಟ್ಟಿದ್ದಾರೆ. ಬೇಕಾದ ಮೆಡಿಕಲ್ ಟೆಸ್ಟ್ ಮಾಡಿ ಎಲ್ಲಾ ರೀತಿಯಲ್ಲೂ ಚರ್ಚೆ ಮಾಡ್ತಾರೆ ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ