ಕೃಷಿ ಜಮೀನನ್ನು ವಾಣಿಜ್ಯೋದ್ದೇಶಕ್ಕೆ ಬಳಸಿಕೊಳ್ಳಲು ಭೂಪರಿವರ್ತನೆ ಅಗತ್ಯವಿಲ್ಲ - ಹೈಕೋರ್ಟ್‌

geetha

ಶುಕ್ರವಾರ, 12 ಜನವರಿ 2024 (15:00 IST)
ಬೆಂಗಳೂರು : ಅರ್ಜಿದಾರರು ತಮ್ಮ 1.29 ಎಕರೆ ಕೃಷಿ ಜಮೀನನ್ನು ಕೃಷಿಯೇತರ ಚಟುವಟಿಕೆಗೆ ಬಳಸಲು ಸಲ್ಲಿಸಿದದ ಅರ್ಜಿಯನ್ನು ಬೈಲಹೊಂಗಲ ಪುರಸಭೆ ತಿರಸ್ಕರಿಸಿತ್ತು. ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯ ಜಮೀನಿಗೆ ಬರುವ ಪ್ರಕರಣದಕ್ಕೆ ಹೈಕೋರ್ಟ್‌ ನಲ್ಲಿ ನೀಡಿದ್ದ ಆದೇಶವನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಅದೇ ಕಾನೂನು ಇಲ್ಲಿಯೂ  ಸಹ ಅನ್ವಯಿಸಲಿದೆ ಎಂದು ಹೇಳಿದರು.

ಯಾವುದೇ ಪುರಸಭೆ ಹಾಗು ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಕೃಷಿ ಜಮೀನನ್ನು ವಾಣಿಜ್ಯೋದ್ದೇಶಕ್ಕೆ ಬಳಸಿಕೊಳ್ಳಲು ಭೂಪರಿವರ್ತನೆ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಬೆಳಗಾವಿಯ ಉದ್ಯಮಿ ಶ್ರೀಶೈಲ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ  ನಡೆಸಿದ ನ್ಯಾ. ಸೂರಜ್‌ ಗೋವಿಂದ ರಾಜು ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ