ಲೈಂಗಿಕ ಸುಖಕ್ಕೆ ಒಲ್ಲೆ ಎನ್ನುವುದು ಕ್ರೌರ್ಯ- ಹೈಕೋರ್ಟ್

geetha

ಶುಕ್ರವಾರ, 12 ಜನವರಿ 2024 (14:42 IST)
ಮಧ್ಯಪ್ರದೇಶ-ವಿವಾಹ ಎಂಬ ಬಂಧನವು ಶಾರೀರಿಕ ಸಂಬಂಧವನ್ನೂ ಸಹ ಒಳಗೊಂಡಿದೆ. ಇದನ್ನು ಒಪ್ಪಿಯೇ ಗಂಡು -ಹೆಣ್ಣು ಪರಸ್ಪರ ಮದುವೆಯಾಗುತ್ತಾರೆ.  ಯಾವುದೇ ದೈಹಿಕ ಅಸ್ವಸ್ಥತೆ ಇಲ್ಲದೇ ಬೇರಾವುದೋ ನೆಪವೊಡ್ಡಿ ಗಂಡನೊಡನೆ ಸೆಕ್ಸ್‌ ನಡೆಸಲು ನಿರಾಕರಿಸುವುದು ಮಾನಸಿಕ ಕ್ರೌರ್ಯಕ್ಕಿಂತ ಯಾವರೀತಿಯಲ್ಲೀಯೂ ಕಡಿಮೆಯಿಲ್ಲ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶರು, ಹಿಂದೂ ವಿವಾಹ ಕಾಯಿದೆಯ ಅನ್ವಯ ಪತಿಯು  ಈ ಕಾರಣವನ್ನು ನೀಡಿ ಪತ್ನಿಯಿಂದ ವಿಚ್ಛೇದನ ಪಡೆಯಬಹುದು ಎಂದು ಹೇಳಿದರು. 

ಕೌಟುಂಬಿಕ ನ್ಯಾಯಾಲಯದಲ್ಲಿ ತನ್ನ ಅರ್ಜಿ ತಿರಸ್ಕೃತವದ ಬಳಿಕ ಪತಿಯೊಬ್ಬ ಇದನ್ನು ಪ್ರಶ್ನಿಸಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದ. 2006 ರಲ್ಲಿ ಮದುವೆಯಾಗಿದ್ದ ಅರ್ಜಿದಾರನ ಪತ್ನಿಯು ಯಾವುದೇ ನಿರ್ದಿಷ್ಟ ಕಾರಣ ನೀಡದೆಯೇ ಪತಿಯೊಂದಿಗೆ ಸೆಕ್ಸ್‌ ನಡೆಸಲು ನಿರಾಕರಿಸಿದ್ದಳು.

ಗಂಡನೊಡನೆ ಪತ್ನಿ ಸೆಕ್ಸ್‌ ಸಹಮತಿಸದೇ ಇರುವುದು ಕ್ರೌರ್ಯವಾಗಿದೆ. ಇದೇ ಕಾರಣಕ್ಕೆ ಗಂಡ ತನ್ನ ಪತ್ನಿಗೆ ಡಿವೋರ್ಸ್‌ ನೀಡಲು ಯಾವ ಅಡ್ಡಿಯೂ ಇಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ