ಸಿದ್ದರಾಮಯ್ಯ ಕುರ್ಚಿನಾ ಯಾರಾದ್ರೂ ಮುಟ್ಟಕ್ಕೆ ಸಾಧ್ಯನಾ: ಜಮೀರ್ ಅಹ್ಮದ್

Krishnaveni K

ಬುಧವಾರ, 26 ಫೆಬ್ರವರಿ 2025 (14:00 IST)
ಬೆಂಗಳೂರು: ಸಿಎಂ ಬದಲಾವಣೆ ಕುರಿತಾದ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಜಮೀರ್ ಅಹ್ಮದ್, ಸಿದ್ದರಾಮಯ್ಯ ಕುರ್ಚಿನಾ ಯಾರಾದ್ರೂ ಮುಟ್ಟಕ್ಕೆ ಸಾಧ್ಯನಾ ಎಂದಿದ್ದಾರೆ.

ಒಂದೆಡೆ ದಲಿತ ಸಮುದಾಯ ಕೂಗು, ಇನ್ನೊಂದೆಡೆ ಸಿಎಂ ಬದಲಾವಣೆಯಾಗಬೇಕು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕು ಎಂದು ಕಾಂಗ್ರೆಸ್ ನಾಯಕರೇ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಜಮೀರ್ ಈ ರೀತಿ ಹೇಳಿದ್ದಾರೆ.

‘ನೋಡ್ರೀ ನಮ್ಮ ಪಕ್ಷದಲ್ಲಿ ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಕೆಪಿಸಿಸಿ ಅಧ್ಯಕ್ಷರ ಕುರ್ಚಿಯಲ್ಲಿ ಡಿಕೆ ಶಿವಕುಮಾರ್ ಇದ್ದಾರೆ. ಎರಡೂ ಕುರ್ಚಿ ಸದ್ಯಕ್ಕೆ ಖಾಲಿಯಿಲ್ಲ. ಖಾಲಿಯಿದ್ದರೆ ತಾನೇ ಈ ಚರ್ಚೆಗಳೆಲ್ಲಾ’ ಎಂದು ಪ್ರಶ್ನಿಸಿದ್ದಾರೆ.

ಬಳಿಕ ಮಾತನಾಡಿದ ಅವರು ‘ಸಿದ್ದರಾಮಯ್ಯ ಕುರ್ಚಿನಾ ಯಾರಾದ್ರೂ ಮುಟ್ಟಕ್ಕೆ ಸಾಧ್ಯ ಏನ್ರೀ? ಅವರೊಂಥರಾ ಬೆಂಕಿ ಇದ್ದಂಗೆ. ನಾವೆಲ್ಲಾ ಸಿದ್ದರಾಮಯ್ಯನ ಟಗರು ಅಂತೀವಿ. ಅವರೊಂಥರಾ ಬೆಂಕಿ ಇದ್ದಂಗೆ. ಬೆಂಕಿ ಮುಟ್ಟಿದರೆ ಏನಾಗುತ್ತದೆ ಹೇಳಿ? ಸುಟ್ಟೋಗ್ತೀವಿ ಅಷ್ಟೇ’ ಎಂದು ಜಮೀರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ