ಕೊಡಗು: ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಆಗಷ್ಟೇ ಎಸ್ಎಸ್ಎಲ್ ಸಿ ಪಾಸಾದ ಖುಷಿಯಲ್ಲಿದ್ದಳು. ಆದರೆ ಇದೇ ಖುಷಿಯಲ್ಲಿದ್ದ ಆಕೆಯ ಜೀವವನ್ನೇ ತೆಗೆಯಲಾಗಿದೆ. ಇದಕ್ಕೆ ಕಾರಣ ಕೇಳಿದ್ರೆ ಶಾಕ್ ಆಗ್ತೀರಿ.
ಕೊಡಗಿನ ಸೋಮಾರಪೇಟೆಯ ಸೂರ್ಲಬ್ಬಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೀನಾ ಎಂಬ ಅಪ್ರಾಪ್ತ ಬಾಲಕಿ ಕೊಲೆಗೀಡಾದಾಕೆ. ಈಕೆ ನಿನ್ನೆಯಷ್ಟೇ ಪ್ರಕಟಗೊಂಡಿದ್ದ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಅಂಕ ಪಡೆದು ಪಾಸಾಗಿ ಗ್ರಾಮಕ್ಕೇ ಖುಷಿ ತಂದಿದ್ದಳು. ಆಕೆಯ ಶಾಲೆಯವರು ಆಕೆಯ ಸಾಧನೆಯನ್ನು ಕೊಂಡಾಡಿದ್ದರು.
ಆದರೆ ಈ ಖುಷಿಯ ಬೆನ್ನಲ್ಲೇ ಆಕೆಯ ಪೋಷಕರು ಆಕೆಗೆ ಬಾಲ್ಯ ವಿವಾಹ ಮಾಡಲು ಹೊರಟಿದ್ದರು. ಓಂಕಾರಪ್ಪ ಎಂಬಾತನೊಂದಿಗೆ ವಿವಾಹ ನಿಶ್ಚಿತಾರ್ಥ ಸುದ್ದಿ ತಿಳಿದ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣವೇ ಪೊಲೀಸರು ಬಂದು ಆಕೆಯ ನಿಶ್ಚಿತಾರ್ಥ ತಪ್ಪಿಸಿದ್ದರು.
ಬಳಿಕ ಎರಡೂ ಮನೆಯವರು ಅವರವರ ಮನೆಗೆ ತೆರಳಿದ್ದರು. ಆದರೆ ಮತ್ತೆ ಬಂದಿದ್ದ ವರ ಓಂಕಾರಪ್ಪ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಚ್ಚಿನಿಂದ ರುಂಡ-ಮುಂಡ ಬೇರೆಯಾಗುವುದಂತೆ ಚುಚ್ಚಿ ಸಾಯಿಸಿದ್ದಾನೆ. ಈ ಕೃತ್ಯಕ್ಕೆ ಇಡೀ ಗ್ರಾಮಸ್ಥರೇ ಬೆಚ್ಚಿಬಿದ್ದಿದ್ದಾರೆ. ನಿಶ್ಚಿತಾರ್ಥವಾಗದ ಸಿಟ್ಟಿಗೆ ಓಂಕಾರಪ್ಪ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಇದೀಗ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ.