ಕಲಬೆರಕೆ ಹಾಲು ಮಿಶ್ರಣ ಮಾಡುತ್ತಿದ್ದ ಖದೀಮರ ಬಂಧನ: ಕೆಎಂಎಫ್ ಸಿಬ್ಬಂದಿ ಶಾಮೀಲು

ಮಂಗಳವಾರ, 28 ಆಗಸ್ಟ್ 2018 (13:56 IST)
ಹಾಲು ಒಕ್ಕೂಟಕ್ಕೆ ಕಲಬೆರಿಕೆ ಹಾಲು ಮಿಶ್ರಣ ಮಾಡಿ ಸರಬರಾಜು ಮಾಡುತ್ತಿದ್ದ ಜಾಲ ಪತ್ತೆಯಾಗಿದೆ.  ಒಟ್ಟು ಒಂಬತ್ತು ಆರೋಪಗಳಿನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಹಾಸನ ಹಾಲು ಒಕ್ಕೂಟಕ್ಕೆ ಕಲಬೆರಿಕೆ ಹಾಲು ಮಿಶ್ರಣ ಮಾಡಿ ಸರಬರಾಜು ಮಾಡುತ್ತಿದ್ದ ಜಾಲ ಪತ್ತೆಯಾಗಿದೆ.  
ಹಾಲಿನ ಕ್ಯಾನ್ ಸಾಗಣೆ ಮಾಡುವ ವಾಹನದಲ್ಲಿ ಮಿಕ್ಸಿಂಗ್ ಮಾಡುತ್ತಿದ್ದ ಆರೋಪಿಗಳ ಜೊತೆ ಹಾಸನ, ಸಕಲೇಶಪುರ, ಚಿಕ್ಕಮಗಳೂರು, ಬೀರೂರು ಡೈರಿ ಘಟಕಗಳ ಸಿಬ್ಬಂದಿ  ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.

ಚಿಕ್ಕಮಗಳೂರಿನ ಮಾಚೇನಹಳ್ಳಿ ಡೈರಿ ಸಂಘದಲ್ಲಿ ಕೃತ್ಯ ನಡೆದಿರುವ ಬಗ್ಗೆ ಮಾರ್ಚ್ 20 ರಂದು ಹಾಸನ ಕೆ.ಎಂ.ಎಫ್ ಘಟಕ್ಕೆ ಅನಾಮಧೇಯ ಪತ್ರ  ದೊರೆತಿದ್ದು, ಹಾಸನ ಕೆ.ಎಂ.ಎಫ್ ಅಧಿಕಾರಿಗಳಿಂದ ತನಿಖೆ ಕೈಗೊಂಡಾಗ ಪ್ರಕರಣ ಬಯಲಾಗಿದೆ. ಪ್ರಕರಣ ಸಂಬಂಧ ಕೆ.ಎಂ.ಎಫ್ ಅಧಿಕಾರಿ ಸೌಜನ್ಯ  ಮರು ತನಿಖೆಗೆ ಆದೇಶ ನೀಡಿದ್ದು,
ಕೆ ಎಂ ಎಫ್ ಎಂಡಿ ಗೋಪಾಲಯ್ಯ ಅವರು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು.
ದೂರು ನೀಡಿದ ಹತ್ತು ದಿನದಲ್ಲಿ 9 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯಿಂದ ವಿಷಭರಿತ ಹಾಲು ಮಿಶ್ರಣ ಪತ್ತೆಯಾಗಿದೆ. ಹಾಸನ, ಚಿಕ್ಕಮಗಳೂರು ಪೊಲೀಸರಿಂದಲೂ ತನಿಖೆ ಮುಂದುವರೆದಿದೆ.





ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ