ಶಾಸಕ ಮಾಲೀಕಯ್ಯ ಗುತ್ತೇದಾರ್‌ಗೆ ವೇದಿಕೆಯಲ್ಲೇ ತರಾಟೆ

ಸೋಮವಾರ, 26 ಮಾರ್ಚ್ 2018 (13:02 IST)
ಜಿಲ್ಲೆಯ ಪ್ರಭಾವಿ ಶಾಸಕರೆಂದೇ ಗುರ್ತಿಸಿಕೊಂಡಿರುವ ಅಫಜಲಪುರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರನ್ನು ಕಾರ್ಯಕ್ರಮವೊಂದರ ವೇದಿಕೆಯಲ್ಲಿಯೇ ತಾಲೂಕು ಪಂಚಾಯಿತಿ ಉಪಾಧ್ಯಕ್ಷರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. 
ಅಫಜಲಪುರ ತಾಲೂಕಿನ ಕರಜಗಿ  ಗ್ರಾಮದ ಹಾಲಿನ ಶಿಥಲೀಕರಣ ಘಟಕ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಮಾಲೀಕಯ್ಯ ಗುತ್ತೆದಾರ್  ಹಾಗೂ  ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಭಿಮಾಶಂಕರ ಹೋನ್ನಕೇರಿ ನಡುವೆ ವೇದಿಕೆಯಲ್ಲಿ ಜಟಾಪಟಿ ನಡೆದಿದೆ. ಉದ್ಘಾಟನೆ ಬಳಿಕ ಭಾಷಣ ಶುರುಮಾಡಿದ ಮಾಲೀಕಯ್ಯ ಗುತ್ತೇದಾರ್ ತಮ್ಮ ಅಧಿಕಾರ ಅವಧಿಯಲ್ಲಿ ರಾಜ್ಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರು ರಸ್ತೆಯನ್ನೇ ನಿರ್ಮಿಸಿಲ್ಲ ಎಂದು ಆರೋಪಿಸಿದರು.
 
 ಈ ಮಾತನ್ನು ಕೇಳಿ ಕೆರಳಿದ ಬಿಜೆಪಿಯ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಗ್ರಾಮ ಪಂಚಾಯಿತಿ ಅಥವಾ ತಾಲೂಕು ಪಂಚಾಯಿತಿ ಸದಸ್ಯರಿಗೆ ರಸ್ತೆ ನಿರ್ಮಿಸಲು ಹೇಗೆ ಅನುದಾನ ಬರುತ್ತದೆ ಎಂದು ಪ್ರಶ್ನಿಸಿದರು. ಹೀಗಾಗಿ ಕೆಲಕಾಲ ಶಾಸಕ ಹಾಗೂ ತಾಪಂ ಉಪಾಧ್ಯಕ್ಷ ನಡುವೆ ವೇದಿಕೆ ಮೇಲೆಯೇ ವಾಗ್ವಾದ ನಡೆಯಿತು. 
 
ಸ್ಥಳೀಯವಾಗಿ ಕಾರ್ಯಕ್ರಮ ಆಯೋಜಿಸಿದ್ದರೂ ಸಹ ಕರಜಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಸದಸ್ಯರಿಗೆ ಕಾರ್ಯಕ್ರಮಕ್ಕೆ ಆವ್ಹಾನಿಸಿಯೇ ಇಲ್ಲ ಎಂದೂ ಆರೋಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಲೀಕಯ್ಯ ಗುತ್ತೇದಾರ್ ಅಫಜಲಪುರಕ್ಕೆ ನಾನೇ ಸಿಎಂ. ನೀನು ಬೇಕಿದ್ದರೆ ಕೋರ್ಟ್​ಗೆ ಹೋಗು ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷನಿಗೆ ಅವಾಜ್ ಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ