ನಂದಿನಿ ಹಾಲಿನ ದರ ಜನರಿಗೆ ಏನೂ ಹೊರೆಯಾಗಲ್ಲ ಬಿಡ್ರೀ..: ಶಾಸಕ ರಾಜು ಕಾಗೆ

Krishnaveni K

ಶುಕ್ರವಾರ, 28 ಮಾರ್ಚ್ 2025 (14:20 IST)
ಬೆಂಗಳೂರು: ರಾಜ್ಯ ಸರ್ಕಾರ ನಂದಿನಿ ಹಾಲಿನ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ರಾಜು ಕಾಗೆ, ದರ ಏರಿಕೆ ಏನೂ ಅಷ್ಟು ಹೊರೆಯಾಗಲ್ಲ ಎಂದಿದ್ದಾರೆ.

ನಿನ್ನೆಯಷ್ಟೇ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತೀ ಲೀಟರ್ ಗೆ 4 ರೂ.ಗಳಷ್ಟು ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ರೈತರಿಗೆ ಪ್ರೋತ್ಸಾಹ ಧನ ನೀಡುವ ನಿಟ್ಟಿನಿಂದ ಈ ಬೆಲೆ ಏರಿಕೆ ಅನಿವಾರ್ಯ ಎಂದಿತ್ತು.

ಈ ಬಗ್ಗೆ ಇಂದು ಮಾಧ್ಯಮಗಳು ರಾಜು ಕಾಗೆಯವರನ್ನು ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು ‘ಹಾಲಿನ ದರ ಹೆಚ್ಚೇನೂ ಹೊರೆಯಾಗಲ್ಲ. ಅಷ್ಟಕ್ಕೂ ನಾವು ಕಡಿಮೇನೇ ಏರಿಕೆ ಮಾಡಿದ್ದೇವೆ. ಇದೇ ನೂ ಜನರಿಗೆ ಹೊರೆಯಾಗಲ್ಲ’ ಎಂದಿದ್ದಾರೆ.

ಇನ್ನು, ನಾವು ಸಾಕಷ್ಟು ಜನಪರ ಯೋಜನೆಗಳನ್ನು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಯನ್ನು ಟೀಕಿಸುತ್ತಿದ್ದವರೇ ಬೇರೆ ರಾಜ್ಯಗಳಲ್ಲಿ ಅದನ್ನು ಕಾಪಿ ಮಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ