ಬೋಸರಾಜು ಸಭೆಗೆ ‘ಕೈ’ ಕೊಟ್ಟ ಶಾಸಕರು
ರಾಯಚೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಗೆ ಕಾಂಗ್ರೆಸ್ ಶಾಸಕರೆಲ್ಲ ಗೈರಾಗಿದ್ದಾರೆ. ಜಿಲ್ಲಾ ಮಂತ್ರಿ N.S ಭೋಸರಾಜ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಜಿಲ್ಲಾ ಮಂತ್ರಿಗಳ ಪ್ರಥಮ ಸಭೆಗೆ ಜಿಲ್ಲೆಯ 7 ಶಾಸಕರು ಹಾಜರಾಗಿಲ್ಲ.. ಕಾಂಗ್ರೆಸ್ ಪಕ್ಷದ ನಾಲ್ವರು ಶಾಸಕರು ಸೇರಿ ಬಿಜೆಪಿ, ಜೆಡಿಎಸ್ ಶಾಸಕರು ಸಹ ಗೈರಾಗಿದ್ದಾರೆ. ಬೋಸರಾಜು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರಲ್ಲ. ಆದರೂ ಅವರನ್ನು ಮಂತ್ರಿ ಮಾಡಿದ್ದು, ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ಸಚಿವ ಭೋಸರಾಜು ಮೊದಲ ಸಭೆಗೆ ಗೈರು ಹಾಜರಾಗಿ ಶಾಕ್ ಕೊಟ್ಟಿದ್ದಾರೆ.. ಕಾಂಗ್ರೆಸ್ ಶಾಸಕರ ಗೈರು ಹಿನ್ನೆಲೆ ಸಚಿವ ಭೋಸರಾಜುಗೆ ಭಾರಿ ಮುಜುಗರವಾಗಿದೆ. ಸಿಂಧನೂರು, ಮಾನವಿ, ಮಸ್ಕಿ ಹಾಗೂ ರಾಯಚೂರು ಗ್ರಾಮೀಣ ಕಾಂಗ್ರೆಸ್ ಶಾಸಕರು ಸಭೆಗೆ ಗೈರಾಗಿದ್ದಾರೆ.